ADVERTISEMENT

ಟೆನಿಸ್‌: ಫೈನಲ್‌ಗೆ ನಿಕ್ಷೇಪ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 19:04 IST
Last Updated 3 ಮಾರ್ಚ್ 2021, 19:04 IST
ಬಿ.ಆರ್‌.ನಿಕ್ಷೇಪ್
ಬಿ.ಆರ್‌.ನಿಕ್ಷೇಪ್   

ಬೆಂಗಳೂರು: ಉತ್ತಮ ಆಟವಾಡಿದ ಕರ್ನಾಟಕದ ಬಿ.ಆರ್‌.ನಿಕ್ಷೇಪ್– ಅಸ್ಸಾಂನ ಶೇಕ್ ಇಫ್ತಿಕಾರ್ ಅವರು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಎಐಟಿಎ ರಾಷ್ಟ್ರೀಯ ರ‍್ಯಾಂಕಿಂಗ್ ಟೆನಿಸ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು.

ಬುಧವಾರ ನಡೆದ ಪುರುಷರ ಡಬಲ್ಸ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಈ ಜೋಡಿಯು 6-4,5-7,10-6ರಿಂದ ತೆಲಂಗಾಣದ ಶಿವದೀಪ ಕೋಸರಾಜು– ಎ.ಕೆ.ರೋಹಿತ್ ಅವರನ್ನು ಪರಾಭವಗೊಳಿಸಿದರು.

ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿ ನಿಕ್ಷೇಪ್‌– ಇಫ್ತಿಕಾರ್ ಅವರು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಗ್ರಶ್ರೇಯಾಂಕದ ತಮಿಳುನಾಡಿನ ಇರ್ಫಾನ್ ಹುಸೇನ್‌–ಇಹಸಾನ್ ಹುಸೇನ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.