ADVERTISEMENT

ಟೆನಿಸ್‌ | ವಿಶ್ವ ವಿ.ವಿ ಗೇಮ್ಸ್‌: ವೈಷ್ಣವಿಗೆ ಕಂಚು

ಪಿಟಿಐ
Published 25 ಜುಲೈ 2025, 0:43 IST
Last Updated 25 ಜುಲೈ 2025, 0:43 IST
   

ಬರ್ಲಿನ್‌: ಭಾರತದ ಟೆನಿಸ್‌ ಆಟಗಾರ್ತಿ ವೈಷ್ಣವಿ ಅಡ್ಕರ್‌ ಇಲ್ಲಿ ನಡೆದ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಅವರು ಪಾತ್ರವಾದರು. 

ಸೆಮಿಫೈನಲ್‌ನಲ್ಲಿ ವೈಷ್ಣವಿ 6-2, 4-6, 4-6ರಿಂದ ಸ್ಲೋವಾಕಿಯಾದ ಎಸ್ಜ್ಟರ್ ಮೇರಿ ಅವರಿಗೆ ಸೋತು ಕಂಚು ತಮ್ಮದಾಗಿಸಿಕೊಂಡರು.

ಮತ್ತೊಂದೆಡೆ ಭಾರತದ ಕಾಂಪೌಂಡ್‌ ಪುರುಷರ ಮತ್ತು ಮಿಶ್ರ ತಂಡಗಳು ಚಿನ್ನದ ಪದಕ ಸುತ್ತು ಪ್ರವೇಶಿಸಿದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.