ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್ಸ್
ಲಂಡನ್ : ಭಾರತದ ಶ್ರೀರಾಮ್ ಬಾಲಾಜಿ ಮತ್ತು ಮೆಕ್ಸಿಕೊದ ಮಿಗುಯೆಲ್ ಏಂಜೆಲ್ ರೆಯೆಸ್– ವರೆಲಾ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.
ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬಾಲಾಜಿ– ವರೆಲಾ ಜೋಡಿಯು 6-4 6-4 ರಿಂದ ಅಮೆರಿಕದ ಲರ್ನರ್ ಟಿಯೆನ್ ಮತ್ತು ಅಲೆಕ್ಸಾಂಡರ್ ಕೊವಾಸೆವಿಕ್ ಅವರನ್ನು ಮಣಿಸಿತು.
ಇಂಡೊ–ಮೆಕ್ಸಿಕೊ ಜೋಡಿಯು ಎರಡನೇ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕಿತ ಸ್ಪೇನ್‌ನ ಮಾರ್ಸೆಲ್ ಗ್ರಾನೋಲ್ಲರ್ಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜೆಬಲ್ಲೋಸ್ ವಿರುದ್ಧ ಹೋರಾಟ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.