ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ವಸ್ಸೂನ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 19:29 IST
Last Updated 24 ಜೂನ್ 2025, 19:29 IST
   

ಲಂಡನ್: ಫ್ರೆಂಚ್‌ ಓಪನ್‌ನಲ್ಲಿ ಅನಿರೀಕ್ಷಿತವಾಗಿ ಸೆಮಿಫೈನಲ್‌ ತಲುಪಿದ್ದ ಫ್ರಾನ್ಸ್‌ನ ಲೋಯಿಸ್ ವಸ್ಸೂನ್ ಅವರು ವಿಂಬಲ್ಸನ್‌ ಟೆನಿಸ್‌ ಟೂರ್ನಿ ಕ್ವಾಲಿಫೈಯರ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ ಕೆನಡಾದ ಕಾರ್ಸನ್ ಬ್ರಾನ್ಸ್ಟೈನ್ 6-2, 6-7 (1/7), 6-4ರಿಂದ ವಿಶ್ವ ಕ್ರಮಾಂಕದಲ್ಲಿ 65ನೇ ಸ್ಥಾನದಲ್ಲಿ ರುವ ವಸ್ಸೂನ್ ಅವರಿಗೆ ಆಘಾತ ನೀಡಿದರು. ಕಾರ್ಸನ್ 197ನೇ ಕ್ರಮಾಂಕ ಹೊಂದಿದ್ದಾರೆ.

ಫ್ರೆಂಚ್‌ ಓಪನ್‌ಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ 22 ವರ್ಷ ವಯಸ್ಸಿನ ವಸೂನ್‌ ಅವರು ಮೂರನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಮತ್ತು ಆರನೇ ಶ್ರೇಯಾಂಕದ ಮೀರಾ ಆಂಡ್ರೀವಾ ಅವರಿಗೆ ಆಘಾತ ನೀಡಿದ್ದರು. ಆದರೆ, ಸೆಮಿಫೈನಲ್‌ನಲ್ಲಿ ಅಮೆರಿಕದ ಕೊಕೊ ಗಾಫ್‌ ಅವರಿಗೆ ಮಣಿದಿದ್ದರು.

ADVERTISEMENT

ಈ ಸಾಧನೆಯಿಂದಾಗಿ ವಸ್ಸೂನ್‌, ಜೂನ್‌ ಎರಡನೇ ವಾರ ಪ್ರಕಟವಾದ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ 361ನೇ ಸ್ಥಾನದಿಂದ 65ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.