ADVERTISEMENT

ವಿಂಬಲ್ಡನ್ ಟೆನಿಸ್ ಟೂರ್ನಿ: ‘ಹ್ಯಾಟ್ರಿಕ್’ ಪ್ರಶಸ್ತಿ ಮೇಲೆ ಅಲ್ಕರಾಜ್ ಕಣ್ಣು

ಇಂದಿನಿಂದ ಟೂರ್ನಿ l ‘ಹ್ಯಾಟ್ರಿಕ್’ ಪ್ರಶಸ್ತಿ ಮೇಲೆ ಅಲ್ಕರಾಜ್ ಕಣ್ಣು l ಕೊಕೊ, ರಾಡುಕಾನು ಆಕರ್ಷಣೆ

ರಾಯಿಟರ್ಸ್
Published 29 ಜೂನ್ 2025, 20:36 IST
Last Updated 29 ಜೂನ್ 2025, 20:36 IST
<div class="paragraphs"><p>ವಿಂಬಲ್ಡನ್ ಟೆನಿಸ್ ಟೂರ್ನಿ ಪೂರ್ವಾಭ್ಯಾಸದ ಸಂದರ್ಭದಲ್ಲಿ ಅಮೆರಿಕದ ಕೊಕೊ ಗಾಫ್ ಮತ್ತು ಬೆಲರೂಸ್‌ನ ಅರೈನಾ ಸಬಲೆಂಕಾ ಅವರ ನೃತ್ಯದ ಝಲಕ್‌ </p></div>

ವಿಂಬಲ್ಡನ್ ಟೆನಿಸ್ ಟೂರ್ನಿ ಪೂರ್ವಾಭ್ಯಾಸದ ಸಂದರ್ಭದಲ್ಲಿ ಅಮೆರಿಕದ ಕೊಕೊ ಗಾಫ್ ಮತ್ತು ಬೆಲರೂಸ್‌ನ ಅರೈನಾ ಸಬಲೆಂಕಾ ಅವರ ನೃತ್ಯದ ಝಲಕ್‌

   

ಲಂಡನ್: ಹಚ್ಚಹಸುರಿನಿಂದ ನಳನಳಿಸುತ್ತಿರುವ ಆಲ್‌ ಇಂಗ್ಲೆಂಡ್ ಕ್ಲಬ್ ಅಂಕಣಗಳು ವಿಂಬಲ್ಡನ್ ಟೆನಿಸ್ ಟೂರ್ನಿಯ ಆತಿಥ್ಯಕ್ಕೆ ಸಿದ್ಧವಾಗಿವೆ.

ಸೋಮವಾರದಿಂದ ಆರಂಭವಾಗಲಿರುವಪ್ರತಿಷ್ಠಿತ ಟೂರ್ನಿಯಲ್ಲಿ ಯುವ ಹಾಗೂ ಅನುಭವಿ ತಾರೆಗಳು ಪ್ರಶಸ್ತಿಗಾಗಿ ಸೆಣಸಲಿದ್ದಾರೆ. 1877ರಿಂದ ನಡೆಯುತ್ತಿರುವ ಈ ಐತಿಹಾಸಿಕ ಟೂರ್ನಿಯು ವಿಶ್ವದ ಟೆನಿಸ್‌ಪ್ರಿಯರನ್ನು ಸೆಳೆಯುತ್ತದೆ. ಪ್ರತಿ ವರ್ಷ ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್‌ ಓಪನ್ ಟೂರ್ನಿಗಳ ನಂತರ ನಡೆಯುವ ಅತಿ ದೊಡ್ಡ ಗ್ರ್ಯಾನ್‌ಸ್ಲಾಮ್ ಇದಾಗಿದೆ. 

ADVERTISEMENT

ಉದ್ಘಾಟನೆ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್  ಕಣಕ್ಕಿಳಿಯಲಿದ್ದಾರೆ. ಸ್ಪೇನ್‌ ಆಟಗಾರ ಅಲ್ಕರಾಜ್ ಅವರು ‘ಹ್ಯಾಟ್ರಿಕ್‌’ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಈ ಪಂದ್ಯದಲ್ಲಿ ಅವರು ಇಟಲಿಯ ಫ್ಯಾಬಿಯೊ ಫಾಗ್ನಿನಿಅವರನ್ನು ಎದುರಿಸುವರು. 

ಮಹಿಳೆಯರ ಸಿಂಗಲ್ಸ್‌ನಲ್ಲಿ ಈ ವರ್ಷ ಎರಡು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ರನ್ನರ್‌ ಅಪ್ ಆಗಿದ್ದ ಬೆಲರೂಸ್‌ನ ಅರೈನಾ ಸಬಲೆಂಕಾ ಅವರು ಇಲ್ಲಿ ತಮ್ಮ ಅಭಿಯಾವನ್ನು ಕೆನಡಾದ ಕಾರ್ಸನ್‌ ಬ್ರ್ಯಾನಸ್ಟೈನ್ ವಿರುದ್ಧ ಆರಂಭಿಸುವರು. 

ಈಚೆಗಷ್ಟೇ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅಮೆರಿಕದ ಕೊಕೊ ಗಾಫ್ ಅವರು ಮಂಗಳವಾರ ಉಕ್ರೇನ್‌ ದೇಶದ ಡಯಾನಾ ಎಸ್ಟ್ರೆಮಸ್ಕಾ ವಿರುದ್ಧ ಕಣಕ್ಕಿಳಿಯು
ವರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಕೊಕೊ ಅವರು ಗ್ರಾಸ್‌ಕೋರ್ಟ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯದ ಛಲದಲ್ಲಿದ್ದಾರೆ.

ಬ್ರಿಟಿಷ್ ಜೋಡಿಯ ಮುಖಾಮುಖಿ: ಸೋಮವಾರ ಮಹಿಳೆಯರ ಸಿಂಗಲ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ನ ಅಗ್ರ ಶ್ರೇಯಾಂಕದ ಆಟಗಾರ್ತಿ ಎಮಾ ರಾಡುಕಾನು ಮತ್ತು ಮಿಂಗೇ ಶು ಅವರು ಮುಖಾಮುಖಿ ಯಾಗುವರು. 22 ವರ್ಷದ ಎಮಾ ಅವರು ಮಹಿಳೆಯರ ವಿಭಾಗದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿದ್ದರು. ಇದೀಗ ತವರಿನಲ್ಲಿ ಗ್ರ್ಯಾನ್‌ಸ್ಲಾಮ್ ಕಿರೀಟ ಧರಿಸುವತ್ತ ಚಿತ್ತ ನೆಟ್ಟಿದ್ದಾರೆ. ಅವರು 17 ವರ್ಷದ ಮಿಂಗೆ ಶು ಅವರನ್ನು ಎದುರಿಸು ವರು. ಶು ಅವರು ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿ ದ್ದಾರೆ. ಅವರಿಗ ಇದು ಚೊಚ್ಚಲ ಗ್ರ್ಯಾನ್‌ಸ್ಲಾಮ್. 

‘ಕಳೆದ ನಾಲ್ಕು ವರ್ಷಗಳಲ್ಲಿ ಬಹಳಷ್ಟು ಘಟನೆಗಳು ಅಗಿ ಹೋಗಿವೆ. ದೀರ್ಘ ಕಾಲ ಸರಿದುಹೋಗಿದೆ. ಹೊಸ ಪೀಳಿಗೆಯ ಆಟಗಾರ್ತಿ ಯರೊಂದಿಗೆ ಸ್ಪರ್ಧಿಸುವುದು ಒಳ್ಳೆಯ ಸಂಗತಿ. ಅದರಿಂದ ಹೆಚ್ಚು ಸ್ಪರ್ಧೆಗೆ ತಕ್ಕನಾಗಿ ಸಿದ್ಧಗೊಳ್ಳಲು ನಾವು ಕೂಡ ತುದಿಗಾಲಿನಲ್ಲಿ ಪ್ರಯತ್ನಿಸುತ್ತೇವೆ. ಇದೊಂದು ಆರೋಗ್ಯಕರ ಸ್ಪರ್ಧೆಯಾಗಿದೆ’ ’ ಎಂದು ಎಮಾ ಅವರು ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಪ್ರತಿಕ್ರಿಯಿಸಿದರು.

ಗಾಯದ ಸಮಸ್ಯೆ ಮತ್ತು ಪದೇ ಪದೇ ತರಬೇತುದಾರರನ್ನು ಬದಲಾವಣೆ ಮಾಡಿದ್ದರಿಂದಾಗಿ ಎಮಾ ಅವರು ದೀರ್ಘ ಅವಧಿಯಿಂದ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ. ಈ ಟೂರ್ನಿಯಲ್ಲಿಯೂ  ಅವರು ಶೇ 100ರಷ್ಟು ಫಿಟ್ ಆಗಿಲ್ಲ ಎಂದೇ ಹೇಳಲಾಗುತ್ತಿದೆ. 

ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ ಇಗಾ ಶ್ವಾಂಟೆಕ್ ಅವರೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.  24 ವರ್ಷದ ಅವರು ಒಟ್ಟು ಐದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಆದರೆ ವಿಂಬಲ್ಡನ್‌ ಇದುವರೆಗೂ ಅವರಿಗೆ ಒಲಿದಿಲ್ಲ. 

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್ 

ಒಂದು ಋತುವಿನಲ್ಲಿ ಈಗ ಆಡಿಸುತ್ತಿರುವ ಟೂರ್ನಿಗಳು ಹೆಚ್ಚಾಗಿವೆ. ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಅದರಿಂದ ಉತ್ತಮ ಗುಣಮಟ್ಟ ಮತ್ತು ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಟೂರ್ನಿಗಳನ್ನು ನೋಡುವ ಜನರ ಸಂಖ್ಯೆ ಹೆಚ್ಚುತ್ತದೆ
–ಇಗಾ ಶ್ವಾಂಟೆಕ್

25ನೇ ಕಿರೀಟದತ್ತ ಜೊಕೊವಿಚ್ ಚಿತ್ತ

ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ 25ನೇ ಗ್ರ್ಯಾನ್‌ಸ್ಲಾಮ್ ಜಯದ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ. ಅವರು ತಮ್ಮ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಅಲೆಕ್ಸಾಂಡರ್ ಮ್ಯೂಲರ್ ಅವರನ್ನು ಎದುರಿಸಲಿದ್ದಾರೆ. 

ಸರ್ಬಿಯಾದ ದಿಗ್ಗಜ ಆಟಗಾರ ಈ ಹಿಂದೆ ಏಳು ಬಾರಿ ವಿಂಬಲ್ಡನ್ ಕಿರೀಟ ಧರಿಸಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಬರ ಎದುರಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.