ADVERTISEMENT

ಸೆರೆನಾ ಬೆಂಬಲಕ್ಕೆ ನಿಂತ ಸಿಮನ್‌

ಏಜೆನ್ಸೀಸ್
Published 10 ಸೆಪ್ಟೆಂಬರ್ 2018, 15:16 IST
Last Updated 10 ಸೆಪ್ಟೆಂಬರ್ 2018, 15:16 IST

ನ್ಯೂಯಾರ್ಕ್‌:ಮಹಿಳಾ ಟೆನಿಸ್‌ ಸಂಸ್ಥೆಯ (ಡಬ್ಲ್ಯುಟಿಎ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀವ್‌ ಸಿಮನ್‌ ಅವರು ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ಗೆ ಬೆಂಬಲ ಸೂಚಿಸಿದ್ದಾರೆ.

ಭಾನುವಾರ ನಡೆದಿದ್ದ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದ ವೇಳೆ ಸೆರೆನಾ ಅಶಿಸ್ತು ತೋರಿದ್ದರಿಂದ ಅಂಪೈರ್‌ ಕಾರ್ಲೋಸ್‌ ರಾಮೊಸ್‌ ‘ಗೇಮ್‌ ಪೆನಾಲ್ಟಿ’ ವಿಧಿಸಿದ್ದರು. ಇದರಿಂದ ಕೆರಳಿದ್ದ ಸೆರೆನಾ ‘ನೀನು ಕಳ್ಳ, ಮಹಾನ್‌ ಸುಳ್ಳುಗಾರ’ ಎಂದು ರಾಮೊಸ್‌ ಅವರನ್ನು ನಿಂದಿಸಿದ್ದರು.

ಪುರುಷರು ರ‍್ಯಾಕೆಟ್‌ ಮುರಿದರೆ, ಅಂಗಳದಲ್ಲಿ ಬರಿ ಮೈಯಲ್ಲಿ ಕುಳಿತುಕೊಂಡರೆ ಅದು ಅಶಿಸ್ತು ಅನಿಸುವುದಿಲ್ಲ. ಮಹಿಳೆಯರು ರ‍್ಯಾಕೆಟ್‌ ಮುರಿದರೆ, ಪಂದ್ಯದ ವೇಳೆ ಜೆರ್ಸಿ ತೆಗೆದರೆ ತಪ್ಪಾಗುತ್ತದೆ. ಅದಕ್ಕಾಗಿ ದಂಡವನ್ನೂ ಹಾಕುತ್ತಾರೆ. ಇದು ಅಸಮಾನತೆಯಲ್ಲವೇ ಎಂದು ಪ್ರಶ್ನಿಸಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಮನ್‌ ‘ಕ್ರೀಡೆಯಲ್ಲಿ ಎಲ್ಲರೂ ಸಮಾನರು. ಪುರುಷ ಮತ್ತು ಮಹಿಳೆ ಎಂಬ ಭೇದಭಾವ ಯಾರಲ್ಲೂ ಇರಬಾರದು. ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.