ಪ್ಯಾಟ್ ಕಮಿನ್ಸ್ ಹಾಗೂ ಆ್ಯಡಂ ಜಾಂಪಾ
(ಪಿಟಿಐ ಚಿತ್ರ)
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆದ್ದುಕೊಂಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.
ತಂಡಗಳ ಬಲಾಬಲ...
ಎಂದಿನ ಬ್ಯಾಟಿಂಗ್ ಲಹರಿಗೆ ಮರಳಿರುವ ಆಸ್ಟ್ರೇಲಿಯಾ ತಂಡ ಬುಧವಾರ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ಎದುರೂ ಅಂಥದ್ದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆದರೆ ಇದುವರೆಗಿನ ಪಂದ್ಯಗಳನ್ನು ಗಮನಿಸಿದರೆ, ನೆದರ್ಲೆಂಡ್ಸ್ ತಂಡ ಸುಲಭಕ್ಕೆ ಬಗ್ಗದ ತಂಡವಲ್ಲವೆಂಬುದನ್ನು ಸಾಬೀತುಪಡಿಸಿದೆ.
ನಿರಾಶಾದಾಯಕ ರೀತಿಯಲ್ಲಿ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಐದು ಬಾರಿಯ ಚಾಂಪಿಯನ್ನರು ಕಳೆದ ಎರಡು ಪಂದ್ಯಗಳಲ್ಲಿ– ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ– ಅಧಿಕಾರಯುತ ಪ್ರದರ್ಶನ ನೀಡಿದ್ದಾರೆ. ಆದರೆ, ಕೆಲವು ಅನಿರೀಕ್ಷಿತ ಫಲಿತಾಂಶಗಳನ್ನು ಕಂಡ ಈ ಕೂಟದಲ್ಲಿ ಡಚ್ ತಂಡವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂಬುದು ಕಾಂಗರೂ ಪಡೆಗೆ ಗೊತ್ತೇ ಇದೆ. ನೆದರ್ಲೆಂಡ್ಸ್ ತಂಡ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಪರಾಕ್ರಮ ಮೆರೆದಿತ್ತು. ಸೋಮವಾರ, ಪಾಕ್ ತಂಡವನ್ನು ಅಫ್ಗಾನಿಸ್ತಾನ ಮಣಿಸಿದ್ದು, ಆ ತಂಡಕ್ಕೆ ಮತ್ತಷ್ಟು ಪ್ರೇರಣೆ ನೀಡಬಲ್ಲದು. ಆದರೆ, ಪಾಕಿಸ್ತಾನ ತಂಡದ ಮೇಲೆ ಸಾಧಿಸಿದ ಗೆಲುವಿನ ರೀತಿ ಆಸ್ಟ್ರೇಲಿಯಾಕ್ಕೆ ಬಲ ತುಂಬಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.