ADVERTISEMENT

ಪ್ಯಾನಾಸೋನಿಕ್‌ ಫೀಚರ್‌ಫೋನ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ಪ್ಯಾನಾಸೋನಿಕ್ ಇಂಡಿಯಾ ಕಂಪೆನಿ  ಇಜೆಡ್‌೨೪೦ ಮತ್ತು ಇಜೆಡ್‌ ೧೮೦ ಶ್ರೇಣಿಯಲ್ಲಿ ಹೊಸದಾಗಿ ಫೀಚರ್‌ ಫೋನ್‌ ಪರಿಚಯಿಸಿದೆ.
ಎರಡರಲ್ಲೂ ಜಿಪಿಆರ್‌ಎಸ್, ಬ್ಲ್ಯೂಟೂಥ್, ಮೊಬೈಲ್ ಟ್ರ್ಯಾಕರ್ ಮತ್ತು ಎಲ್‌ಇಡಿ ಟಾರ್ಚ್‌, ಎಫ್‌ಎಂ ರೆಕಾರ್ಡಿಂಗ್ ವ್ಯವಸ್ಥೆ ಇದೆ.

ಇಜೆಡ್‌೨೪೦ ಹ್ಯಾಂಡ್‌ಸೆಟ್‌ ೨.೪ ಇಂಚು ಡಿಸ್‌ಪ್ಲೇ ಸ್ಕ್ರೀನ್‌ ಹೊಂದಿದ್ದು, ಮಲ್ಟಿಮೀಡಿಯಾ ಸಾಮರ್ಥ್ಯದ್ದಾ ಗಿದೆ. ಬಾಹ್ಯ ಸ್ಮರಣಕೋಶ ೧೬ ಜಿ.ಬಿ.ವರೆಗೂ ವಿಸ್ತರಿಸಬಹುದು. ೧.೩ ಎಂಪಿ ಕ್ಯಾಮೆರಾ ಇದ್ದು, ಬೆಲೆ ₨೧,೭೯೦. ಇಜೆಡ್‌1೮೦ ಮಾದರಿ ೧.೮ ಇಂಚು ಡಿಸ್‌ಪ್ಲೇ,  ಇಂಡಿಯನ್ ಕ್ಯಾಲೆಂಡರ್, ೦.೩ ಎಂ.ಪಿ ಕ್ಯಾಮೆರಾ ಇದ್ದು,  ₨೧,೩೫೦ ಬೆಲೆಯಲ್ಲಿದೆ ಎಂದಿದೆ  ಪ್ಯಾನಾಸೋನಿಕ್ ಇಂಡಿಯಾ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.