ADVERTISEMENT

ಮೊಬೈಲ್ ಮಾತು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST
ಮೊಬೈಲ್ ಮಾತು
ಮೊಬೈಲ್ ಮಾತು   

`ಸಿಟಿ ಲೆನ್ಸ್ ಪಾಯಿಂಟ್
ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ನೋಕಿಯಾ `ಸಿಟಿ ಲೆನ್ಸ್ ಪಾಯಿಂಟ್~ (City Lens Point)  ಎಂಬ ಹೊಸ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ.

ಈ ಅಪ್ಲಿಕೇಷನ್ ಬಳಸಿ ಗ್ರಾಹಕರು ನಗರಗಳಲ್ಲಿನ ಪ್ರಸಿದ್ಧ ಹೋಟೆಲ್, ರೆಸ್ಟೋರೆಂಟ್ ಮತ್ತು ಷಾಪಿಂಗ್ ಮಾಲ್‌ಗಳ ಮಾಹಿತಿ ಪಡೆಯಬಹುದು. ರೆಸ್ಟೋರೆಂಟ್/ಹೋಟೆಲ್ ಹೆಸರು ದಾಖಲಿಸುತ್ತಿದ್ದಂತೆ ಅದರ ಪೂರ್ಣ ಮಾಹಿತಿ, ತಲುಪಬೇಕಾದ ಸ್ಥಳ, ಮಾರ್ಗದ ವಿವರ ಲಭ್ಯವಾಗುತ್ತದೆ ಎಂದು ಕಂಪೆನಿ ಹೇಳಿದೆ.

ಈ ಅಪ್ಲಿಕೇಷನ್ ಬಳಸಿ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಬಹುದು. ಸಿಟಿ ಲೆನ್ಸ್ ಇದ್ದರೆ ಇಂಟರ್‌ನೆಟ್ ಜಾಲಾಡುವ ಅಗತ್ಯವೇ ಇರದು ಎನ್ನುತ್ತದೆ `ನೋಕಿಯಾ~.

ನೋಕಿಯಾದ `ಲುಮಿಯಾ~ ಸರಣಿಯ ಎಲ್ಲ  ಸ್ಮಾರ್ಟ್‌ಫೋನ್‌ಗಳಲ್ಲಿ ಈ ಅಪ್ಲಿಕೇಷನ್ ಉಚಿತವಾಗಿ ಲಭ್ಯವಿದೆ. ನೋಕಿಯಾ 700, 701 ಮತ್ತು `ಎನ್8~ ಮಾದರಿಗಳಿಗೂ ಡೌನ್‌ಲೋಡ್ ಮಾಡಿಕೊಳ್ಳಬಹುದು.
 

ಅಗ್ರ ಸ್ಥಾನದಲ್ಲಿ ಚೀನಾ
ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಚೀನಾ ಮೊದಲ ಸ್ಥಾನಕ್ಕೆ ಏರಿದೆ. ಅಗ್ಗದ ಸ್ಮಾರ್ಟ್‌ಫೋನ್ ಮಾರಾಟ ಚೀನಾದಲ್ಲಿ ದ್ವಿಗುಣಗೊಂಡಿದ್ದು, ಮಾರುಕಟ್ಟೆ ವಿಸ್ತರಿಸಿದೆ ಎಂದು ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ನಡೆಸಿದ ಸಮೀಕ್ಷೆ ತಿಳಿಸಿದೆ.

ಈ ವರ್ಷ ಚೀನಾದ ಸ್ಮಾರ್ಟ್‌ಫೋನ್ ರಫ್ತು ಶೇ 26.5ರಷ್ಟು ಹೆಚ್ಚಿದ್ದರೆ, ಅಮೆರಿಕ ಶೇ 17ರಷ್ಟು ಪ್ರಗತಿ ದಾಖಲಿಸಿದೆ. 

  ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ 2.5ರಷ್ಟು ಪಾಲು ಹೊಂದಿರುವ ಭಾರತ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 2016ರ ವೇಳೆಗೆ ಭಾರತದ ಮಾರುಕಟ್ಟೆ ಪಾಲು ಶೇ 8.5ರಷ್ಟು ಹೆಚ್ಚಬಹುದು ಎಂದು `ಐಡಿಸಿ~ ಭವಿಷ್ಯ ನುಡಿದಿದೆ.

ಅಗ್ಗದ ದರದ ಹ್ಯಾಂಡ್‌ಸೆಟ್‌ಗಳು, 100 ಡಾಲರ್‌ಗಿಂತ ಕಡಿಮೆ ಬೆಲೆ  ಸ್ಮಾರ್ಟ್‌ಫೋನ್‌ಗಳು ಚೀನಾ ಮಾರುಕಟ್ಟೆ ಪಾಲು ಹೆಚ್ಚುವಂತೆ ಮಾಡಿವೆ ಎನ್ನುತ್ತಾರೆ `ಐಡಿಸಿ~ ಮಾರುಕಟ್ಟೆ ವಿಶ್ಲೇಷಕ ವಾಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT