ADVERTISEMENT

ಲಾಗಿನ್: ಇಂಟರ್‌ನೆಟ್ ವಿನಿಮಯ ಕೇಂದ್ರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 18:30 IST
Last Updated 1 ಫೆಬ್ರುವರಿ 2011, 18:30 IST

ಇಂಟರ್‌ನೆಟ್ ವಿನಿಮಯ ಕೇಂದ್ರಗಳು ದೂರದ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಮಾತ್ರ ಇರುವುದರಿಂದ ಸದ್ಯಕ್ಕೆ ಇಂಟರ್‌ನೆಟ್ ಸೇವೆ ದುಬಾರಿಯಾಗಿ ಪರಿಣಮಿಸಿದೆ.

ಏಷ್ಯಾದ ದೇಶಗಳಲ್ಲಿನ ಇಂಟರ್‌ನೆಟ್ ಸೌಲಭ್ಯ ದೂರದ ವಿನಿಮಯ ಕೇಂದ್ರಗಳ ಮೂಲಕವೇ ....
ತಮ್ಮದೇ ಆದ ಇಂತಹ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಆಗ್ನೇಯ ಏಷ್ಯಾ ದೇಶಗಳ ಸಂಘಟನೆ (ಆಸಿಯಾನ್) ಚಿಂತನೆ ನಡೆಸುತ್ತಿದೆ. ಐರೋಪ್ಯ ಒಕ್ಕೂಟವು ಈಗಾಗಲೇ ತನ್ನದೇ ಆದ ವಿನಿಮಯ ಕೇಂದ್ರ ಮತ್ತು ಇಂಟರ್‌ನೆಟ್ ವಿಳಾಸ (domain) .eu ಹೊಂದಿದೆ. ಇದೇ ಬಗೆಯ ಇಂಟರ್‌ನೆಟ್ ವಿಳಾಸ ಹೊಂದಲು ಸ್ವತಂತ್ರ ವಿನಿಮಯ ಕೇಂದ್ರ ಇರುವುದು ಅವಶ್ಯಕ.

 ಈ ನಿಟ್ಟಿನಲ್ಲಿ 10 ದೇಶಗಳ ಸಂಘಟನೆ ‘ಆಸಿಯಾನ್’ ಸಂಘಟನೆ ಚಿಂತನೆ ನಡೆಸುತ್ತಿದೆ. ಇದು ತಕ್ಷಣಕ್ಕೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇಲ್ಲ. ಎಲ್ಲ ದೇಶಗಳು ಸಹಕರಿಸಿದರೆ 2015ರ ಹೊತ್ತಿಗೆ ಇಂತಹ ವಿನಿಮಯ ಕೇಂದ್ರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

ಒಂದು ವೇಳೆ ಇಂತಹ ವಿನಿಮಯ ಕೇಂದ್ರ ಅಸ್ತಿತ್ವಕ್ಕೆ ಬಂದರೆ ಸಂಪರ್ಕ, ಸಂವಹನ ವ್ಯವಸ್ಥೆ ಸಾಕಷ್ಟು ಸುಧಾರಿಸುವುದಲ್ಲದೇ, ಇಂಟರ್‌ನೆಟ್ ಬಳಕೆ ವೆಚ್ಚವೂ ಕಡಿಮೆಯಾಗಲಿದೆ.       l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.