ಛಾಯಾಗ್ರಹಣ ಪ್ರಿಯರಿಗೆ ಇಲ್ಲೊಂದು ಹೊಸ ಸುದ್ದಿ ಇದೆ. ನೈಜ ಚಿತ್ರಗಳನ್ನು ತೆಗೆದ ಬಳಿಕವೂ ಅದನ್ನು ರಿ ಫೋಕಸ್ ಮಾಡಬಲ್ಲ ಅತ್ಯಾಧುನಿಕ ಕ್ಯಾಮೆರಾ ತಯಾರಾಗಿದೆ. ಲಿಟ್ರೊ ಕಂಪೆನಿ ‘ಇಲ್ಯೂಮ್’ ಎಂಬ ಹೊಸ ಕ್ಯಾಮೆರಾ ತಯಾರಿಸಿದೆ.
ಹೀಗಾಗಿ ಇನ್ನು ಮುಂದೆ ಬಹಳ ವಿರಳ ಎನಿಸಿದ ಚಿತ್ರವನ್ನು ಸೆರೆಹಿಡಿದ ಬಳಿಕ ಔಟ್ ಆಫ್ ಫೋಕಸ್ ಆಗಿದೆ. ಲೈಟಿಂಗ್ ಕಾಂಬಿನೇಷನ್ ಸರಿ ಇಲ್ಲ ಎಂದು ಮರುಗುವುದು ತಪ್ಪಲಿದೆ. ಫೋಟೊ ತೆಗೆದ ಬಳಿಕವೂ ಅದನ್ನು ‘ರಿಫೋಕಸ್’ ಮಾಡಬಹುದು.
ಕ್ಯಾಮೆರಾ ‘ಕ್ಲಿಕ್’ ಮಾಡಿ ಒಂದು ಚಿತ್ರವನ್ನು ಸೆರೆಹಿಡಿದ ಬಳಿಕ ಅದನ್ನು ಯಾವ ದೃಷ್ಟಿಕೋನದಿಂದ ಕ್ಲಿಕ್ಕಿಸಿದ್ದರೆ ಮತ್ತಷ್ಟು ಚೆನ್ನಾಗಿ ಕಾಣುತ್ತಿತ್ತು ಎಂಬುದನ್ನು ಈ ಹೊಸ ವ್ಯವಸ್ಥೆಯಿಂದ ತಿಳಿದುಕೊಳ್ಳಬಹುದು ಎನ್ನುತ್ತದೆ ಕಂಪೆನಿ.
ಕ್ರಿಯಾಶೀಲ ಛಾಯಾಗ್ರಾಹಕರಿಗಾಗಿ ಈ ಕ್ಯಾಮೆರಾ ತಯಾರಿಸಲಾಗಿದೆ. ಕ್ಯಾಮೆರಾ 8ಎಕ್ಸ್ ಜೂಮ್ ಲೆನ್ಸ್ (30-250 ಎಂಎಂ), 1/4000 ಶಟರ್ಸ್, 2.0 ಅಪರ್ಚರ್ ಇದೆ.
ಈ ಹೊಸ ಸಂವೇದಕ (sensor)4 ಕೋಟಿಯಷ್ಟು ಬೆಳಕಿನ ಕಿರಣಗಳನ್ನು ಸೆರೆಹಿಡಿಯಬಲ್ಲದು. ಅಂದರೆ ಸದ್ಯ ಬಳಕೆಯಲ್ಲಿರುವ ಕ್ಯಾಮೆರಾ ಸಂವೇದಕಗಳಿಗಿಂತ ಮೂರು ಪಟ್ಟು ಹೆಚ್ಚು ಈ ಕ್ಯಾಮೆರಾದಲ್ಲಿ ತೆಗೆದ ಫೋಟೊವನ್ನು ಮೊಬೈಲ್, ಕಂಪ್ಯೂಟರ್ ಗೆ ಕಳುಹಿಸಬಹುದು ಅಲ್ಲದೆ 3ಡಿ ರೂಪದಲ್ಲೂ ಪಡೆಯಬಹುದು ಎನ್ನುತ್ತದೆ ಕಂಪೆನಿ.
ಈ ಕ್ಯಾಮೆರಾ ಜುಲೈನಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಅಂದಾಜು ಬೆಲೆ ₨90,810 ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.