ADVERTISEMENT

QLED smart tv | ಸ್ಮಾರ್ಟ್‌ ಟಿ.ವಿ: ಸ್ಮಾರ್ಟ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 23:30 IST
Last Updated 1 ಆಗಸ್ಟ್ 2025, 23:30 IST
   

ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು, ಮಾನಿಟರ್‌ಗಳು ಮತ್ತು ಸ್ಮಾರ್ಟ್ ಟಿ.ವಿ.ಗಳನ್ನು ಒಳಗೊಂಡಂತೆ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ಕಂಪನಿ ಏಸರ್ ಇದೀಗ ಕ್ಯುಎಲ್ಇಡಿ ಸ್ಮಾರ್ಟ್ ಟೆಲಿವಿಷನ್‌ಗಳ ಪ್ರೀಮಿಯಂ ಸಾಲಿನ ಹೊಸ ಏಸರ್ ವಿ–ಪ್ರೊ ಕ್ಯುಎಲ್‌ಇಡಿ ಟಿ.ವಿ.ಯನ್ನು ಮಾರುಕಟ್ಟೆಗೆ ತಂದಿದೆ.

ಗುಣಮಟ್ಟದ ಪ್ರದರ್ಶನ ಮತ್ತು ಅತ್ಯುತ್ತಮ ಧ್ವನಿ ಸಂಯೋಜನೆಯನ್ನು ಒಳಗೊಂಡಿರುವ ಇದು ಮನರಂಜನಾ ಉತ್ಸಾಹಿಗಳಿಗೆ ಅತ್ಯುತ್ತಮ ಆಯ್ಕೆ. ಚಲನಚಿತ್ರ, ನೆಚ್ಚಿನ ಕಾರ್ಯಕ್ರಮ ವೀಕ್ಷಿಸಲು, ಅಷ್ಟೇ ಅಲ್ಲದೆ ಗೇಮಿಂಗ್‌ನಲ್ಲಿ ಇದು ಉತ್ತಮ ಅನುಭವ ನೀಡುತ್ತದೆ.

ಅಂತರ್ನಿರ್ಮಿತ ವೈ–ಫೈ (ಇನ್‌ಬಿಲ್ಟ್‌), ಬ್ಲೂ ಟೂತ್, ಬಹು ಎಚ್‌ಡಿಎಂಐ ಮತ್ತು ಯುಎಸ್‌ಬಿ ಪೋರ್ಟ್‌ನೊಂದಿಗೆ ತಡೆರಹಿತ ಸಂಪರ್ಕ ಸೌಲಭ್ಯ ಒದಗಿಸುತ್ತದೆ ಎಂಬುದು ಕಂಪನಿಯ ವಿವರಣೆ.

ADVERTISEMENT

ಸ್ಮಾರ್ಟ್ ಸಂಪರ್ಕ ಆಯ್ಕೆಗಳಿವೆ. ವೈ–ಫೈ, ಬ್ಲೂಟೂತ್‌ ಸಂಪರ್ಕವನ್ನು ಬೇಗನೇ ಪಡೆಯಬಹುದು. ಕಡಿಮೆ ವಿದ್ಯುತ್ ಬಳಕೆಗೆ ಸರಿಹೊಂದುವಂತೆ ವಿನ್ಯಾಸಗೊಳಿಸಿರುವ ಟಿ.ವಿ. ಪರದೆಯು ವಿವಿಧ ಗಾತ್ರಗಳಲ್ಲಿ ಲಭ್ಯವಿದೆ .

  • ಇದು ಭಾರತದ ಮೊದಲ ಆ್ಯಂಡ್ರಾಯ್ಡ್ 14 ಗೂಗಲ್ ಪ್ಲ್ಯಾಟ್‌ಫಾರ್ಮ್ ಆಗಿದ್ದು, ಎಐ ಪ್ರೋಸೆಸರ್ ಅನ್ನು ಬಳಸಲಾಗಿದೆ.

  • 43 ಇಂಚಿನ ಟಿ.ವಿ ಬೆಲೆ ₹ 27,999 ಹಾಗೂ 55 ಇಂಚಿನ ಟಿ.ವಿಗೆ ₹ 55,000. ಬಜಾಜ್ ಮಾಲ್‌ನಲ್ಲಿ, ಅಮೆಜಾನ್‌ನಲ್ಲಿ ಟಿ.ವಿ
    ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.