ADVERTISEMENT

ಭಾರತಕ್ಕೆ ಬರಲು ಸಜ್ಜಾಗಿವೆ ಅಮೇಜ್‌ಫಿಟ್ ಸ್ಮಾರ್ಟ್ ವಾಚ್‌ಗಳು

​ಪ್ರಜಾವಾಣಿ ವಾರ್ತೆ
Published 28 ಮೇ 2020, 8:00 IST
Last Updated 28 ಮೇ 2020, 8:00 IST
ಅಮೇಜ್‌ಫಿಟ್ ಟಿ-ರೆಕ್ಸ್
ಅಮೇಜ್‌ಫಿಟ್ ಟಿ-ರೆಕ್ಸ್   
"ಹುವಾಮಿ ಅಮೇಜ್‌ಫಿಟ್ ಬಿಪಿ ಎಸ್"

ಅಮೇಜ್‌ಫಿಟ್ ಟಿ-ರೆಕ್ಸ್ ಎಂಬ ಸ್ಮಾರ್ಟ್ ವಾಚ್ ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. ದೇಹದಲ್ಲಿ ಧರಿಸಬಹುದಾದ (ವೇರೆಬಲ್) ಸ್ಮಾರ್ಟ್ ಸಾಧನಗಳ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಹುವಾಮಿ ಕಾರ್ಪೊರೇಶನ್ ಇದನ್ನು ಸಿದ್ಧಪಡಿಸಿದೆ.

CES 2020 ಯಲ್ಲಿ ಘೋಷಿಸಲಾಗಿದ್ದ 'ಅಮೇಜ್‌ಫಿಟ್ ಟಿ-ರೆಕ್ಸ್' ಎಂಬ ಈ ಸಾಧನವು ಜಾಗತಿಕವಾಗಿ ವಿಭಿನ್ನ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಜೂನ್ ತಿಂಗಳ ಮೊದಲ ಭಾಗದಲ್ಲಿ ಇದು ಭಾರತದಲ್ಲಿ ಬಿಡುಗಡೆಯಾಗಲಿದೆ.

ತೀವ್ರ ತಾಪಮಾನ, ಧೂಳು, ಲವಣಾಂಶವಿರುವ ವಾತಾವರಣ ಸೇರಿದಂತೆ ಪ್ರತಿಕೂಲ ಹವಾಮಾನವನ್ನು ತಾಳಿಕೊಳ್ಳಬಲ್ಲ ತಂತ್ರಜ್ಞಾನವು ಟಿ-ರೆಕ್ಸ್‌ನಲ್ಲಿದೆ. -40 ಡಿಗ್ರಿಯಿಂದ 70℃ ವರೆಗೂ ಅದು ಎರಡು ಗಂಟೆಗಳ ಕಾಲ ತಾಳಿಕೊಳ್ಳಬಲ್ಲುದು ಎಂದು ಕಂಪನಿ ಹೇಳಿಕೊಂಡಿದೆ.

ADVERTISEMENT

ಹುವಾಮಿ ಅಮೇಜ್‌ಫಿಟ್ ಬಿಪ್ ಎಸ್ ಜೂ.3ರಂದು

ಹುವಾಮಿ ಅಮೇಜ್‌ಫಿಟ್ ಬಿಪ್ ಎಸ್ ಎಂಬ ಇನ್ನೊಂದು ಶಕ್ತಿಶಾಲಿ ಸ್ಮಾರ್ಟ್ ವಾಚ್ ಜೂನ್ 3ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ಹುವಾಮಿ ಕಾರ್ಪೊರೇಶನ್‌ನ ಮತ್ತೊಂದು ಉತ್ಪನ್ನವಾಗಿದ್ದು, ಶಕ್ತಿಶಾಲಿ ಬ್ಯಾಟರಿ ಇದರಲ್ಲಿದೆ. 40 ದಿನಗಳ ಬ್ಯಾಟರಿ ಸಾಮರ್ಥ್ಯವಿದ್ದು, ತೀರಾ ಹಗುರ ಮತ್ತು ತೆಳುವಾಗಿದೆ. ನಿದ್ರೆಯ ಜಾಡು ಹಿಡಿಯುವ ಸೆನ್ಸರ್, ಜಿಪಿಎಸ್, ಬ್ಲೂಟೂತ್ ಮ್ಯೂಸಿಕ್ ನಿಯಂತ್ರಣ ಮತ್ತು ಜಲನಿರೋಧಕ ಸಾಮರ್ಥ್ಯ ಇದರಲ್ಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹುವಾಮಿ-ಪಾಯ್ ಎಂಬ ಹೃದಯದ ಆರೋಗ್ಯ ಮತ್ತು ಒಟ್ಟು ದೈಹಿಕ ಫಿಟ್ನೆಸ್ ಸೂಚಿಸುವ ತಂತ್ರಜ್ಞಾನ ಇದರಲ್ಲಿದೆ.

ಈ ಸ್ಮಾರ್ಟ್ ವಾಚ್‌ನಲ್ಲಿ 14 ಸ್ಪೋರ್ಟ್ಸ್ ಮೋಡ್‌ಗಳಿವೆ. ಇದು ಹೊರಾಂಗಣ ಹಾಗೂ ಒಳಾಂಗಣಗಳಲ್ಲಿ ಸೈಕ್ಲಿಂಗ್, ಸ್ಕೀಯಿಂಗ್, ವಾಕಿಂಗ್ ಸೇರಿದಂತೆ ನಮ್ಮ ದೈನಂದಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ. 1.3 ಇಂಚು AMOLED ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್ ವಾಚ್‌ನಲ್ಲಿ ಜಿಪಿಎಸ್, ಬಯೋಟ್ರ್ಯಾಕರ್, ಆಪ್ಟಿಕಲ್ ಹೃದಯ ಬಡಿತ ಸೆನ್ಸರ್, ನಿದ್ರೆಯ ಜಾಡು ಹಿಡಿಯುವ ಸೆನ್ಸರ್ ಕೂಡ ಇದೆ. ಇವೆಲ್ಲವೂ ನಮ್ಮ ಫಿಟ್‌ನೆಸ್ ಗುರಿ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅಮೇಜ್‌ಫಿಟ್ ಟಿ-ರೆಕ್ಸ್ 20 ದಿನಗಳ ಬ್ಯಾಟರಿ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.