ರಾಯಿಟರ್ಸ್ ಚಿತ್ರ
ನವದೆಹಲಿ: ವಿಶ್ವದ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್, ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಖಾಸಗಿ ಡಿಜಿಟಲ್ ವಾಲೆಟ್ ಅನ್ನು ಪರಿಚಯಿಸಿದೆ.
ಈ ಮೂಲಕ ಬಳಕೆದಾರರು ಕಾರ್ಡ್‌ಗಳು, ಟಿಕೆಟ್‌ಗಳು, ಪಾಸ್‌ಗಳು, ಡಿಜಿಟಲ್ ಕೀ, ಐಡಿಗಳಂತಹ ಡಿಜಿಟಲ್ ಮಾಹಿತಿಯನ್ನು ಇಲ್ಲಿ ಸ್ಟೋರ್ ಮಾಡಬಹುದಾಗಿದೆ.
ಪ್ಲೇ ಸ್ಟೋರ್ ಮೂಲಕ ಗೂಗಲ್ ವಾಲೆಟ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ. ಇದರಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಗಿಫ್ಟ್ ಕಾರ್ಡ್ ಸೇರಿದಂತೆ ಇತರೆ ಡಿಜಿಟಲ್ ಕಾರ್ಡ್‌ಗಳನ್ನು ಸ್ಟೋರ್ ಮಾಡಬಹುದಾಗಿದೆ.
ಗೂಗಲ್ ವಾಲೆಟ್‌ಗಿಂತಲೂ ಹಣ ಮತ್ತು ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವ ‘Google Pay app’ಭಿನ್ನವಾದುದ್ದಾಗಿದೆ ಎಂದು ಸಂಸ್ಥೆ ಹೇಳಿದೆ.
ಇದೇವೇಳೆ, ಗೂಲ್ ಪೇ ಆ್ಯಪ್ ಅನ್ನು ಹಿಂಪಡೆಯುವುದಿಲ್ಲ ಎಂದು ಹೇಳಿರುವ ಗೂಗಲ್, ಇದು ನಮ್ಮ ಪ್ರಾಥಮಿಕ ಪೇಮೆಂಟ್ಸ್ ಆ್ಯಪ್ ಆಗಿ ಮುಂದುವರಿಯಲಿದೆ. ಗೂಗಲ್ ವಾಲೆಟ್ ಅನ್ನು ಪಾವತಿರಹಿತ ಬಳಕೆಗಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.