ADVERTISEMENT

ಗೂಗಲ್ ಡ್ರೈವ್‌ನಲ್ಲಿ ಫೋಟೊ ಸೇವ್ ಮಾಡುವುದು ಹೇಗೆ?

ರಶ್ಮಿ ಕಾಸರಗೋಡು
Published 24 ಅಕ್ಟೋಬರ್ 2018, 19:30 IST
Last Updated 24 ಅಕ್ಟೋಬರ್ 2018, 19:30 IST

ಗೂಗಲ್ ಡ್ರೈವ್‌ನಲ್ಲಿ ಫೋಟೊಗಳನ್ನು ಸೇವ್ ಮಾಡುವುದು ಸುಲಭ. ಈ ರೀತಿ ಫೋಟೊಗಳನ್ನು ಸೇವ್ ಮಾಡುವುದರಿಂದ ನಿಮಗೆ ಯಾವಾಗ ಎಲ್ಲಿ ಬೇಕಾದರೂ ಫೋಟೊಗಳನ್ನು access ಮಾಡಬಹುದು. ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿ ಫೋಲ್ಡರ್‌ಗಳನ್ನು ಶೇರ್ ಮಾಡುವುದೂ ಸುಲಭ.

ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಮಾಡಿರುವ ಫೋಟೊಗಳನ್ನು ಗೂಗಲ್ ಡ್ರೈವ್‌ಗೆ ಅಪ್‌ಲೋಡ್‌ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಯಾವುದೇ ವೆಬ್ ಬ್ರೌಸರ್‌ನಲ್ಲಿ ಗೂಗಲ್ ಡ್ರೈವ್ (https://www.google.com/drive/) ಓಪನ್ ಮಾಡಿ, ಗೂಗಲ್ ಖಾತೆಯಿಂದ ಲಾಗಿನ್ ಆಗಿ.

ADVERTISEMENT

ಲಾಗಿನ್ ಆದ ಕೂಡಲೇ ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಬೇಕಾಗಿರುವ ಫೋಟೊಗಳನ್ನು ಆಯ್ಕೆ ಮಾಡಿ. ನಂತರ new ಬಟನ್ ಕ್ಲಿಕ್ ಮಾಡಿದ ಮೇಲೆ File upload ಕ್ಲಿಕ್ ಮಾಡಿ. ನಿಮ್ಮ ಕಂಪ್ಯೂಟರ್‌ನ File explorer ಓಪನ್ ಆಗುತ್ತದೆ.

ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಆಗಿರುವ ಫೋಟೊಗಳಲ್ಲಿ ಯಾವುದನ್ನು ಗೂಗಲ್ ಡ್ರೈವ್‌ಗೆ ಅಪ್‌ಲೋಡ್‌ ಮಾಡಬೇಕು ಎಂಬುದನ್ನು ಆಯ್ಕೆ ಮಾಡಿ okay ಕ್ಲಿಕ್ ಮಾಡಿ. ಈಗ ನಿಮ್ಮ ಫೋಟೊಗಳು ಗೂಗಲ್ ಡ್ರೈವ್‌ನಲ್ಲಿ ಸೇವ್ ಆಗುತ್ತವೆ.

ಮೊಬೈಲ್‌ನಲ್ಲಿ ಆಗಿದ್ದರೆ, ಗೂಗಲ್ ಡ್ರೈವ್ app ಓಪನ್ ಮಾಡಿ ಅಲ್ಲಿ ಬಲ ಭಾಗದಲ್ಲಿ ಕಾಣುವ ಪ್ಲಸ್ ಬಟನ್ ಕ್ಲಿಕ್ ಮಾಡಿ ಹೊಸ ಫೋಲ್ಡರ್‌ನಲ್ಲಿ ಫೋಟೊಗಳನ್ನು ಸೇವ್ ಮಾಡಬೇಕೆಂದಿದ್ದರೆ New Folder ಕ್ಲಿಕ್ ಮಾಡಿಇಲ್ಲದೇ ಇದ್ದರೆ ನೇರವಾಗಿ ಅಪ್‌ಲೋಡ್‌ ಕ್ಲಿಕ್ ಮಾಡಿ. ಅಪ್‌ಲೋಡ್‌ ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಫೋನ್‌ನಲ್ಲಿರುವ ಆಲ್ಬಂ ತೆರೆದುಕೊಳ್ಳುತ್ತದೆ. ಅಲ್ಲಿಂದ ನಿಮಗೆ ಬೇಕಾಗಿರುವ ಫೋಟೊ ಆಯ್ಕೆ ಮಾಡಿ ಅಪ್‌ಲೋಡ್‌ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.