ADVERTISEMENT

ಗ್ಯಾಜೆಟ್ ಮಾರುಕಟ್ಟೆಗೆ ಐಕ್ಯೂ ಹೊಸ ಸ್ಮಾರ್ಟ್‌ಫೋನ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 3:45 IST
Last Updated 6 ಆಗಸ್ಟ್ 2022, 3:45 IST
ಐಕ್ಯೂ 9ಟಿ ಸ್ಮಾರ್ಟ್‌ ಪೋನ್‌
ಐಕ್ಯೂ 9ಟಿ ಸ್ಮಾರ್ಟ್‌ ಪೋನ್‌   

ಗ್ಯಾಜೆಟ್ ಮಾರುಕಟ್ಟೆಗೆ ಐಕ್ಯೂ ನೂತನ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಐಕ್ಯೂ 9T (iQOO 9T) ಅಲ್ಫಾ ಬ್ಲ್ಯಾಕ್ ಮತ್ತು ವೈಟ್ ಲೆಜೆಂಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.

6.78 ಇಂಚಿನ ಫುಲ್‌ಎಚ್‌ಡಿ ಅಮೊಲೆಡ್ ಡಿಸ್‌ಪ್ಲೇ, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಸ iQOO 9T ಸ್ಮಾರ್ಟ್‌ಫೋನ್‌ನ ವಿಶೇಷತೆಯಾಗಿದೆ.

3.2Ghz ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8+ ಜೆನ್. 1 ಒಕ್ಟಾ–ಕೋರ್ ಪ್ರೊಸೆಸರ್ ಇದ್ದು, ಅಡ್ರೆನೊ 730 ಗ್ರಾಫಿಕ್ಸ್ ಬೆಂಬಲವಿದೆ.

ADVERTISEMENT

ಆ್ಯಂಡ್ರಾಯ್ಡ್ 12 ಆಧಾರಿತ ಫನ್‌ಟಚ್ ಓಎಸ್ 23 ನೂತನ iQOO 9T ಸ್ಮಾರ್ಟ್‌ಫೋನ್‌ನಲ್ಲಿದ್ದು, 8 GB ಮತ್ತು 12GB LPDDR5 6400Mbps RAM ಹಾಗೂ 128 GB ಹಾಗೂ 256 GB ಮೆಮೊರಿ ಆಯ್ಕೆಯ ಜತೆಗೆ, 4,700mAh ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.

ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 13+12 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

Nokia 5710 XpressAudio: ವೈರ್‌ಲೆಸ್ ಇಯರ್‌ಬಡ್ಸ್ ಸಹಿತ ಬರಲಿದೆ ಐಕಾನಿಕ್ ನೋಕಿಯ

ಬೆಲೆ ವಿವರ: 8GB RAM + 128GB ಮಾದರಿಗೆ ₹49,999 ಹಾಗೂ 12GB RAM + 256GB ಆವೃತ್ತಿಗೆ ₹54,999 ದರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.