ADVERTISEMENT

Lenovo Y700: ಲೆನೊವೊ ಟ್ಯಾಬ್ಲೆಟ್ ಬಿಡುಗಡೆ, ಗೇಮಿಂಗ್ ಪ್ರಿಯರಿಗೆ ಹಲವು ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2022, 9:02 IST
Last Updated 11 ಜನವರಿ 2022, 9:02 IST
ಲೆನೊವೊ ಟ್ಯಾಬ್ಲೆಟ್ (ಸಂಗ್ರಹ ಚಿತ್ರ)
ಲೆನೊವೊ ಟ್ಯಾಬ್ಲೆಟ್ (ಸಂಗ್ರಹ ಚಿತ್ರ)   

ಬೆಂಗಳೂರು: ಲೆನೊವೊ ಕಂಪನಿ ಜಾಗತಿಕ ಮಾರುಕಟ್ಟೆಗೆ ಹೊಸ ಸರಣಿಯ ಗೇಮಿಂಗ್ ಟ್ಯಾಬ್ಲೆಟ್ (Y700) ಅನ್ನು ಬಿಡುಗಡೆ ಮಾಡಿದೆ. ದರ ಮತ್ತು ಲಭ್ಯತೆಯ ಇತರ ವಿವರಗಳನ್ನು ಕಂಪನಿ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

ಈ ಟ್ಯಾಬ್ಲೆಟ್ 8.8 ಇಂಚಿನ ಡಿಸ್‌ಪ್ಲೇ, 120 ಹರ್ಟ್ಸ್‌ ರಿಫ್ರೆಶ್‌ ರೇಟ್‌ ಮತ್ತು ಜೆಬಿಎಲ್ ಸ್ಪೀಕರ್‌ಗಳನ್ನು ಒಳಗೊಂಡಿದೆ.

Y700 ವಿಶೇಷತೆಗಳು:

* ಟ್ಯಾಬ್ಲೆಟ್‌ 2560 x 1600 ಸ್ಕ್ರೀನ್‌ ರೆಸೊಲ್ಯುಶನ್ ಸಾಮರ್ಥ್ಯದ 8.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.

ADVERTISEMENT

* ಟ್ಯಾಬ್ಲೆಟ್ ಡಿಸ್‌ಪ್ಲೇ 120 Hz ರಿಫ್ರೆಶ್ ರೇಟ್ ಹೊಂದಿದೆ. ರಿಫ್ರೆಶ್ ರೇಟ್ ಜಾಸ್ತಿ ಇದ್ದಷ್ಟೂ ಗೇಮಿಂಗ್‌ಗೆ ಹೆಚ್ಚು ಪೂರಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.