ADVERTISEMENT

ಬರಲಿದೆ ಒನ್‌ಪ್ಲಸ್‌ನ ಅಗ್ಗದ ಸ್ಮಾರ್ಟ್ ‌ಟಿವಿ

ಪಿಟಿಐ
Published 8 ಜೂನ್ 2020, 19:30 IST
Last Updated 8 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರೀಮಿಯಂ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಒನ್‌ಪ್ಲಸ್‌, ಭಾರತದಲ್ಲಿ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಪ್ರವೇಶಿಸುವುದಾಗಿ ಸೋಮವಾರ ತಿಳಿಸಿದೆ.

ಶಿಯೋಮಿ ಮತ್ತು ರಿಯಲ್‌ಮಿಗೆ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಆರಂಭಿಕ ಮತ್ತು ಮಧ್ಯಮ ಗಾತ್ರದ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗುವುದು ಎಂದು ಹೇಳಿದೆ.

2019ರ ಸೆಪ್ಟೆಂಬರ್‌ನಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಕಾಲಿಟ್ಟಿರುವ ಕಂಪನಿಯು 55 ಇಂಚಿನ ಎರಡು ಮಾದರಿಗಳನ್ನು ಬಿಡುಗಡೆ ಮಾಡಿತ್ತು. ಬೆಲೆ ₹ 69,900 ಮತ್ತು ₹ 99,990 ಇದೆ. ಇದೇ ಜುಲೈ 2 ರಂದು ಹೊಸ ಸರಣಿಯ ಟಿವಿಗಳನ್ನೂ ಬಿಡುಗಡೆ ಮಾಡಲಿದೆ.

ADVERTISEMENT

ಶಿಯೋಮಿ ಮತ್ತು ರಿಯಲ್‌ಮಿ ಕಂಪನಿಗಳು ಕಡಿಮೆ ಬೆಲೆಯ ಸ್ಮಾರ್ಟ್‌ಟಿವಿಗಳನ್ನು ನೀಡುತ್ತಿದ್ದು, ಮಾರುಕಟ್ಟೆಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಿವೆ. ಹೀಗಾಗಿ ಪ್ರೀಮಿಯಂ ಗ್ರಾಹಕರನ್ನು ಮಾತ್ರವೇ ಕೇಂದ್ರೀಕರಿಸಿದ್ದ ಒನ್‌ಪ್ಲಸ್‌, ಇದೀಗ ಕಡಿಮೆ ಬೆಲೆಯ ಉತ್ಪನ್ನಗಳತ್ತ ಗಮನ ಹರಿಸಲು ಆರಂಭಿಸಿದ್ದು, ಈ ಕಂಪನಿಗಳಿಗೆ ಪೈಪೋಟಿ ನೀಡಲಿದೆ.

‘2020ರಲ್ಲಿ ಒನ್‌ಪ್ಲಸ್‌ ಕನೆಕ್ಟೆಡ್‌ ಇಕೊಸಿಸ್ಟಂ ಎಕ್ಸ್‌ಪೀರಿಯನ್ಸ್ ಅನ್ನು ಇನ್ನಷ್ಟು ವೃದ್ಧಿಸಲು ನಿರ್ಧರಿಸಲಾಗಿದೆ’ ಎಂದು ಸ್ಥಾಪಕ ಪೀಟ್‌ ಲಾವ್ ತಿಳಿಸಿದ್ದಾರೆ.

ಮಾರುಕಟ್ಟೆ ಚಿತ್ರಣ
15%:
2019ರಲ್ಲಿ ಟಿವಿ ಮಾರಾಟದಲ್ಲಿನ ಏರಿಕೆ
1.5 ಕೋಟಿ:2019ರಲ್ಲಿ ಮಾರಾಟವಾಗಿರುವ ಟಿವಿಗಳು
32 ಇಂಚು:ಅತಿ ಹೆಚ್ಚು ಬೇಡಿಕೆ ಇರುವುದು
25%:ವರ್ಷದಿಂದ ವರ್ಷಕ್ಕೆ ಸ್ಮಾರ್ಟ್‌ಟಿವಿ ಮಾರಾಟದಲ್ಲಿ ಆಗಿರುವ ಏರಿಕೆ

ಬೆಲೆಯ ವಿವರ
ಶಿಯೋಮಿ ಟಿವಿ
₹12,499 ರಿಂದ ಆರಂಭ
ರಿಯಲ್‌ಮಿ ₹ 12,999ರಿಂದ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.