ADVERTISEMENT

160W ವೇಗದ ಚಾರ್ಜಿಂಗ್: ಟ್ರಿಪ್‌ಮೇಟ್ ಅಡಾಪ್ಟರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2025, 14:59 IST
Last Updated 10 ಏಪ್ರಿಲ್ 2025, 14:59 IST
<div class="paragraphs"><p>Promate Technologies</p></div>

Promate Technologies

   

ಬೆಂಗಳೂರು: ಪ್ರೊಮೇಟ್ ಟೆಕ್ನಾಲಜಿಸ್‌ ಕಂಪನಿಯು ಪ್ರವಾಸ ಅಥವಾ ಪ್ರಯಾಣದ ಸಂದರ್ಭದಲ್ಲಿ ಅನುಕೂಲ ಮಾಡುವ ಟ್ರಿಪ್‌ಮೇಟ್‌–ಜಿಎಎನ್‌–160W ಚಾರ್ಜಿಂಗ್ ಅಡಾಪ್ಟರ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಚಾರ್ಜಿಂಗ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಪ್ರೊಮೇಟ್‌ ಕಂಪನಿಯು ವಿವಿಧ ಎಲೆಕ್ಟ್ರಾನಿಕ್ ಸಾಧನಗಳನ್ನು ವೇಗವಾಗಿ (160 ವ್ಯಾಟ್ಸ್ ವರೆಗೆ) ಚಾರ್ಜ್ ಮಾಡಬಲ್ಲ, ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾದ TripMate-GaN160 ಅಡಾಪ್ಟರ್‌ ಅನ್ನು ಪರಿಚಯಿಸಿದೆ.

ADVERTISEMENT

ಇದರ ಮೂಲಕ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್, ಇಯರ್‌–ಪಾಡ್‌, ಲ್ಯಾಪ್‌ಟಾಪ್‌ಗಳನ್ನು ಏಕಕಾಲದಲ್ಲಿ ಮತ್ತು ತ್ವರಿತವಾಗಿ ಚಾರ್ಜ್‌ ಮಾಡಬಹುದು. ಇದರಲ್ಲಿ ಯುಎಸ್‌ಬಿ-ಎ, ಟೈಪ್-ಸಿ (ಹೆಚ್ಚುವರಿ ಎ.ಬಿ) ಪೋರ್ಟ್‌ಗಳೂ ಇವೆ.

ಯೂನಿವರ್ಸಲ್‌ ಎಸಿ ಸಾಕೆಟ್‌ (2500w) ಹೊಂದಿರುವುದು ಇದರ ವಿಶೇಷ. ಸುಮಾರು 150ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಸುಲಭವಾಗಿ ಗ್ರಾಹಕರು ಬಳಕೆ ಮಾಡಬಹುದು. 

GaNFast ಚಾರ್ಜರ್‌ನಲ್ಲಿ ಅತ್ಯಾಧುನಿಕವಾದ ಗ್ಯಾಲಿಯಂ ನೈಟ್ರೈಡ್ (GaN) ಸೆಮಿಕಂಡಕ್ಟರ್‌ಗಳನ್ನು ಬಳಸಲಾಗಿದೆ.

140W ಸಾಮರ್ಥ್ಯದ ಮೂರು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳಿದ್ದು, ಲ್ಯಾಪ್‌ಟಾಪ್‌ಗಳ ಚಾರ್ಜಿಂಗ್‌ಗೆ ಅನುಕೂಲ. ಜೊತೆಗೆ, 60W ವೇಗದ ಚಾರ್ಜಿಂಗ್ ಸಾಮರ್ಥ್ಯದ ಒಂದು ಯುಎಸ್‌ಬಿ-ಎ ಮಾದರಿಯ ಪೋರ್ಟ್ ಇದೆ. 2500W ಸಾಮರ್ಥ್ಯದ ಯೂನಿವರ್ಸಲ್ ಎಸಿ ಸಾಕೆಟ್ ಹಲವು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ಅನುಕೂಲ ಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಪ್ರಮುಖ ಇ ಕಾಮರ್ಸ್ ವೇದಿಕೆಗಳಲ್ಲಿ ಇದನ್ನು ಕೊಂಡುಕೊಳ್ಳಬಹುದು.

ಬೆಲೆ: ₹8999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.