ನವದೆಹಲಿ: ಭಾರತದ ಮೊಬೈಲ್ ಫೋನ್ ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆದಿರುವ ಶಿಯೋಮಿ, ಗುರುವಾರ ಇನ್ನೆರಡು ಮಾದರಿಯ ಹೊಸ ಸ್ಮಾರ್ಟ್ ಫೋನ್ಗಳನ್ನು ಬಿಡುಗಡೆ ಮಾಡಿದೆ.
ರೆಡ್ ಮಿ ನೋಟ್– 7 ಮತ್ತು ರೆಡ್ ಮಿ ನೋಟ್– 7 ಪ್ರೊ ಸ್ಮಾರ್ಟ್ ಫೋನ್ಗಳು ಕ್ರಮವಾಗಿ ಮಾರ್ಚ್ 6 ಹಾಗೂ ಮಾರ್ಚ್ 13ರಿಂದ ಆನ್ಲೈನ್ ಮಾರುಕಟ್ಟೆಯಲ್ಲಿ ದೊರೆಯಲಿವೆ.
‘ರೆಡ್ ಮೀ 7 ಪ್ರೊ’ನಲ್ಲಿ 48 ಮೆಗಾ ಪಿಕ್ಸೆಲ್ ರಿಯಲ್ ಕ್ಯಾಮರಾ, ಸೆಲ್ಫಿಗಾಗಿ 13 ಮೆಗಾ ಪಿಕ್ಸೆಲ್ ಕ್ಯಾಮರಾ ನೀಡಲಾಗಿದೆ. 6.3 ಇಂಚಿನ ಡಾಟ್ ನಾಚ್ ಡಿಸ್ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, ರೇರ್ ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡಿದೆ. 4 ಜಿ.ಬಿ ಮತ್ತು 6ಜಿ.ಬಿ ರ್ಯಾಮ್ ಜೊತೆಗೆ 64 ಮತ್ತು 128 ಜಿ.ಬಿ ಸ್ಟೋರೇಜ್ ಸಾಮರ್ಥ್ಯದ, ಡ್ಯುಯೆಲ್ ಸಿಮ್ ಅಳವಡಿಸಬಹುದಾದ ಪ್ರತ್ಯೇಕ ಫೋನ್ಗಳು ಬಿಡುಗಡೆಯಾಗಿವೆ. ಕಂಪನಿಯು ಯುವ ಜನರ ಗೇಮಿಂಗ್ಗೇ ಆದ್ಯತೆ ನೀಡಿದ್ದು, 4000 ಎಂಎಎಚ್ ಬ್ಯಾಟರಿ ಅಳವಡಿಸಲಾಗಿದೆ. ಅದೇ ರೀತಿ, 12 ಮತ್ತು 5 ಮೆಗಾ ಪಿಕ್ಸೆಲ್ ಕ್ಯಾಮರಾ ಸೌಲಭ್ಯವಿರುವ ರೆಡ್ ಮಿ ನೋಟ್ 7 ಸ್ಮಾರ್ಟ್ ಫೋನ್ ಅನ್ನೂ ಇದೇ ವೇಳೆ ಬಿಡುಗಡೆ ಮಾಡಲಾಗಿದ್ದು, ಸಾಕಷ್ಟು ವಿಶೇಷತೆ ಹೊಂದಿದೆ. ಈ ಎಲ್ಲ ಸ್ಮಾರ್ಟ್ ಫೋನ್ಗಳು ಕಪ್ಪು, ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿವೆ.
* 48 ಎಂ.ಪಿ ಕ್ಯಾಮೆರಾ
* 128 ಜಿ.ಬಿ. ಸ್ಟೋರೇಜ್
* 6 ಜಿ.ಬಿ. ರ್ಯಾಮ್
ಬೆಲೆ ವಿವರ
* 4 ಜಿ.ಬಿ ರ್ಯಾಮ್ನ ರೆಡ್ ಮಿ ನೋಟ್–7 ಪ್ರೊ ಬೆಲೆ ₹13,999
* 6 ಜಿ.ಬಿ ರ್ಯಾಮ್ನ ರೆಡ್ ಮಿ ನೋಟ್–7 ಪ್ರೊ ಬೆಲೆ ₹16,999
* 3ಜಿ.ಬಿ ರ್ಯಾಮ್ನ ರೆಡ್ ಮಿ ನೋಟ್–7 ಬೆಲೆ ₹9,999
* 4ಜಿ.ಬಿ ರ್ಯಾಮ್ನ ರೆಡ್ ಮಿ ನೋಟ್–7 ಬೆಲೆ ₹11,999
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.