ಬೆಂಗಳೂರು: ಸ್ಯಾಮ್ಸಂಗ್ ಕಂಪನಿಯ ‘ಗ್ಯಾಲಕ್ಸಿ ಎಫ್ 62’ ಹೊಸ ಸ್ಮಾರ್ಟ್ಫೋನ್ ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್ಗಳಲ್ಲಿ ಸೋಮವಾರದಿಂದ ಲಭ್ಯವಾಗಲಿದೆ.
‘ಗ್ಯಾಲಕ್ಸಿ ಎಫ್ 62’ ಸ್ಮಾರ್ಟ್ಫೋನ್ನಲ್ಲಿ 2.73 ಗಿಗಾಹರ್ಟ್ಸ್ ಒಕ್ಟಾ ಕೋರ್ ಪ್ರೊಸೆಸರ್, 128 ಜಿ.ಬಿ. ವಿಸ್ತರಿಸಬಹುದಾದ ಸ್ಟೊರೇಜ್ ಮತ್ತು ಕಲರ್ ಸೂಪರ್ ಅಮೊಲೆಡ್ ಸ್ಕ್ರೀನ್ ಇವೆ. 7,000 ಎಂಎಎಚ್ ಬ್ಯಾಟರಿಯಿಂದಾಗಿ ಇದು ಆಟ ಆಡಲು ಕೂಡ ಅತ್ಯಂತ ಸೂಕ್ತವಾಗಿದೆ ಎಂದು ಕಂಪನಿ ಹೇಳಿದೆ. ₹ 21,499ರಿಂದ ಇದರ ಬೆಲೆ ಆರಂಭವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.