ADVERTISEMENT

ಜನಪ್ರಿಯತೆ ಹಾದಿಯಲ್ಲಿ ಶೇರ್‌ಚಾಟ್‌ ಬಳಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:12 IST
Last Updated 29 ಜನವರಿ 2019, 20:12 IST
ಜನಪ್ರಿಯತೆ ಹಾದಿಯಲ್ಲಿ ಶೇರ್‌ಚಾಟ್‌ ಬಳಕೆ
ಜನಪ್ರಿಯತೆ ಹಾದಿಯಲ್ಲಿ ಶೇರ್‌ಚಾಟ್‌ ಬಳಕೆ   

ಬೆಂಗಳೂರು: ಕನ್ನಡ ಭಾಷೆಯಲ್ಲಿನ ಸಾಮಾಜಿಕ ಮಾಧ್ಯಮ ಶೇರ್‌ಚಾಟ್‌ನ 20 ಲಕ್ಷಕ್ಕೂ ಹೆಚ್ಚು ಬಳಕೆದಾರರು ಅನೇಕ ವಿದ್ಯಮಾನಗಳಿಗೆ ಸ್ಪಂದಿಸುವ ಪ್ರವೃತ್ತಿ ಹೆಚ್ಚುತ್ತಿದೆ.

ಕನ್ನಡದಲ್ಲಿ ಮಾಹಿತಿ ಸೃಷ್ಟಿಸುವ ಪ್ರಮಾಣವು ವ್ಯಾಪಕವಾಗಿ ಬೆಳೆಯುತ್ತಿದೆ. ಬಳಕೆದಾರರು ಘಟನೆಗಳಿಗೆ ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದಾರೆ. ಶೇರ್‌ಚಾಟ್‌ ಬಳಕೆಯಲ್ಲಿ ಪುರುಷರು ಮುನ್ನಡೆಯಲ್ಲಿ ಇದ್ದಾರೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ದಿನದ ಬಹುಭಾಗವನ್ನು ಶೇರ್‌ಚಾಟ್‌ ಬಳಸುವುದರಲ್ಲಿ ಕಳೆಯುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT