ADVERTISEMENT

ವಿವೊ ನೆಕ್ಸ್‌ 3: ಕೇವಲ 13 ನಿಮಿಷಗಳಲ್ಲಿ ಬ್ಯಾಟರಿ ಫುಲ್‌ ಚಾರ್ಜ್‌ 

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 10:18 IST
Last Updated 30 ಆಗಸ್ಟ್ 2019, 10:18 IST
   

ಬೆಂಗಳೂರು: ಚೀನಾದ ವಿವೊ ಕಂಪೆನಿಯ ಸ್ಮಾರ್ಟ್‌ಫೋನ್‌ ಅಂದ ತಕ್ಷಣ ನೆನಪಾಗುವುದು ಪಾಪ್‌ಅಪ್‌ ಸೆಲ್ಪಿ ಕ್ಯಾಮೆರಾ! ಇದೀಗ ಈ ಕಂಪೆನಿ ಅತಿ ವೇಗದಲ್ಲಿ ಚಾರ್ಜ್‌ ಆಗುವಮತ್ತು 5 ಜಿ ತಂತ್ರಜ್ಞಾನ ಹೊಂದಿರುವ ’ವಿವೊ ನೆಕ್ಸ್‌ 3‘ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ.

2019ರ ಫೆಬ್ರುವರಿಯಲ್ಲಿ ನಡೆದಮೊಬೈಲ್ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ 5 ಜಿ ತಂತ್ರಜ್ಞಾನ ಹಾಗೂ120W ಸಾಮರ್ಥ್ಯದ ಸೂಪರ್‌ ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ ತಯಾರಿಸುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಈ ಎರಡು ವಿಶೇಷತೆಗಳನ್ನು ಒಳಗೊಂಡಿರುವವಿವೊ ನೆಕ್ಸ್‌ 3 ಫೋನ್ ಸೆಪ್ಟೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹಲವು ಗುಣವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಭಾರೀ ಗಮನ ಸೆಳೆದಿದೆ.

ADVERTISEMENT

ವಿವೋ ನೆಕ್ಸ್‌ 3 ಫೋನಿನ ಬಿಡುಗಡೆ ಬಗ್ಗೆ ದಿನಾಂಕ ಪ್ರಕಟವಾಗದಿದ್ದರೂ ಇದರ ವೈಶಿಷ್ಟ್ಯತೆಗಳನ್ನುಮೊಬೈಲ್‌ ಫೋನ್‌ಗಳ ಗುಣಮಟ್ಟ ಮಾಪನ ಮಾಡುವ ಕೆಲವು ಆನ್‌ಲೈನ್‌ ಪೊರ್ಟಲ್‌ಗಳು ಸೋರಿಕೆ ಮಾಡಿವೆ ಎನ್ನಲಾಗುತ್ತಿದೆ.

ವಿವೊ 3 ನೆಕ್ಸ್‌ ಫೋನ್ 4,000mAH ಬ್ಯಾಟರಿಯನ್ನು ಹೊಂದಿದೆ. ಇದರ ಜತೆಗೆ 120W ಸಾಮರ್ಥ್ಯದ ಸೂಪರ್‌ ಫ್ಲ್ಯಾಶ್‌ ಚಾರ್ಜ್‌ ತಂತ್ರಜ್ಞಾನ ಹೊಂದಿದ್ದು ಕೇವಲ 13 ನಿಮಿಷಗಳಲ್ಲಿ4,000mAH ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್‌ ಆಗಲಿದೆ.

ಸೋರಿಕೆಯಾಗಿರುವ ಇತರೆ ವೈಶಿಷ್ಟ್ಯಗಳು...

* 64ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ, ಪಾಪ್‌ಅಪ್‌ ಸೆಲ್ಪಿ ಕ್ಯಾಮೆರಾ

*ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್‌

* 4ಕೆ ಹೈಡೆಫಿನಿಶನ್ ವಿಡಿಯೊ ಸೌಲಭ್ಯ

ಉಳಿದಂತೆ ವಿವೊ ನೆಕ್ಸ್‌ ಸರಣಿಫೋನಿನ ವೈಶಿಷ್ಟ್ಯಗಳೇ ಮುಂದುವರಿಯಲಿವೇ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.