ADVERTISEMENT

ವಿವೊ ವಿ17 ಪ್ರೊಡ್ಯುಯಲ್‌ ಪಾಪ್‌ಅಪ್‌ ಸೆಲ್ಫಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 19:30 IST
Last Updated 22 ಜನವರಿ 2020, 19:30 IST
vivo v1 7 pro
vivo v1 7 pro   

ಪ್ರೀಮಿಯಂ ಸ್ಮಾರ್ಟ್‌ಫೋನ್‌ ತಯಾರಿಸುವ ವಿವೊ ಬ್ರ್ಯಾಂಡ್‌, ಪ್ರತಿ ಬಾರಿಯೂ ತನ್ನ ಗ್ರಾಹಕರಿಗೆ ಹೊಸ ಆಯ್ಕೆಗಳನ್ನು ನೀಡಲು ಗಮನ ಹರಿಸುತ್ತದೆ. ಈ ನಿಟ್ಟಿನಲ್ಲಿ ವಿವೊ ವಿ17 ಪ್ರೊ ಹಲವು ಅಂಶಗಳಿಂದ ಗಮನ ಸೆಳೆಯುತ್ತದೆ. ಇದರಲ್ಲಿ ಮುಖ್ಯವಾಗಿರುವುದು ಡ್ಯುಯಲ್‌ ಪಾಪ್‌ಅಪ್‌ ಸೆಲ್ಫಿ, ಅತ್ಯಾಕರ್ಷಕವಾದ ವಿನ್ಯಾಸ.

6.44 ಇಂಚಿನ ಅಮೊಎಲ್‌ಇಡಿ ಡಿಸ್‌ಪ್ಲೇ ಮನೆಯ ಒಳಗೆ ಮತ್ತು ಹೊರಗಡೆ ಬಳಸುವಾಗ ಯಾವುದೇ ಸಮಸ್ಯೆ ಆಗುವುದಿಲ್ಲ. ಗಾತ್ರದ ದೃಷ್ಟಿಯಿಂದಲೂ ಒಂದೇ ಕೈಯಲ್ಲಿ ಹಿಡಿದುಕೊಂಡು ಸುಲಭವಾಗಿ ಟೈಪಿಸಬಹುದು. ಗೊರಿಲ್ಲಾ ಗ್ಲಾಸ್‌ 6 ಬಳಸಿರುವುದರಿಂದ ಒಂದೊಮ್ಮೆ ಕೈಜಾರಿ ಬಿದ್ದರೂ ಡಿಸ್‌ಪ್ಲೇಗೆ ಹೆಚ್ಚು ಹಾನಿಯಾಗದಂತೆ ತಡೆಯಲಿದೆ. ಕಂಪನಿಯೇ ಬ್ಯಾಕ್‌ ಕೇಸ್‌ ನೀಡಿದೆ. ಆದರೆ, ಅದನ್ನು ಬಳಸಿದರೆ ಫೋನ್‌ನ ಅಂದವನ್ನು ಮರೆಮಾಚಿದಂತೆ ಆಗುತ್ತದೆ. ಬ್ಯಾಕ್‌ ಕೇಸ್‌ ಇಲ್ಲದೇ ಇದ್ದಾಗಲೇ ಫೋನ್‌ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಫೇಸ್‌ ರೆಕಗ್ನಿಷನ್‌

ADVERTISEMENT

ಫೋನ್‌ ಅನ್‌ಲಾಕ್‌ ಮಾಡಲು ಫೇಸ್‌ ರೆಕಗ್ನಿಷನ್‌ ಪ್ರಾಥಮಿಕ ಆಯ್ಕೆ ಆಗಿಲ್ಲ. ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಮಾಡುವಾಗ ಸತತವಾಗಿ ಮೂರು ಬಾರಿ ವಿಫಲವಾದರೆ ಮಾತ್ರವೇ ಫೇಸ್‌ ರೆಕಗ್ನಿಷನ್‌ ಸಕ್ರಿಯಗೊಳ್ಳುತ್ತದೆ. ಫೇಸ್‌ ರೆಕಗ್ನಿಷನ್ ಅಷ್ಟೊಂದು ಸುರಕ್ಷಿತ ಅಲ್ಲ ಎಂದು ಸೆಟ್ಟಿಂಗ್ಸ್‌ನಲ್ಲಿ ಕಂಪನಿ ಸಮರ್ಥನೆ ನೀಡಿದೆ. ಆದರೆ, ಈಗಂತೂ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌, ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಆಯ್ಕೆಗಳು ಕಡ್ಡಾಯ ಎನ್ನುವಂತಾಗಿದೆ. ಹೀಗಿರುವಾಗ ಫೇಸ್‌ ರೆಕಗ್ನಿಷನ್‌ ಬಳಸಿ ಅನ್‌ಲಾಕ್‌ ಮಾಡುವ ಆಯ್ಕೆ ನೀಡದೇ ಇರುವುದು ಅಚ್ಚರಿ ಮೂಡಿಸಿದೆ.

ಪ್ರೀಮಿಯಂ ಫೋನ್‌ ಆಗಿದ್ದರೂ 3.5ಎಂಎಂ ಹೆಡ್‌ಫೋನ್‌ ಜಾಕ್‌ ನೀಡಲಾಗಿದೆ. ಡ್ಯುಯಲ್ ಪಾಪ್‌ಅಪ್‌ ಕ್ಯಾಮೆರಾಗೆ ಹೆಚ್ಚಿನ ಜಾಗ ಬಳಕೆಯಾಗಿದ್ದರೂ ಈ ಆಯ್ಕೆ ನೀಡಿರುವುದು ಉತ್ತಮ ಸಂಗತಿ. ಈಗಂತು ‘ಸಿ–ಟೈಪ್‌’ ಚಾರ್ಜರ್‌ ಬಳಕೆ ಹೆಚ್ಚಾಗಿರುವುದರಿಂದ ಅದರಲ್ಲಿಯೇ ಹೆಡ್‌ಫೋನ್‌ ಆಯ್ಕೆ ಇರುತ್ತದೆ. ಗೂಗಲ್ ಅಸಿಸ್ಟಂಟ್‌ ಸಕ್ರಿಯಗೊಳಿಸಲು ಸ್ಮಾರ್ಟ್‌ಬಟನ್‌ ಉಪಯಕ್ತವಾಗಿದೆ.
ಡೇಟಾ, ವೈಫೈ, ಸಕ್ರಿಯಗೊಳಿಸಲು ಸ್ಕ್ರೀನ್‌ನ ಮೇಲ್ಭಾಗದಿಂದ ಕೆಳಕ್ಕೆ ಪುಲ್‌ ಡೌನ್‌ ಮಾಡುತ್ತೇವೆ. ಆದರೆ, ಇದರಲ್ಲಿ ಸ್ಕ್ರೀನ್‌ನ ಕೆಳಭಾಗದಿಂದ ಮೇಲಕ್ಕೆ ಪುಲ್‌ ಅಪ್‌ ಮಾಡಬೇಕು. ಮೊದಲ ಬಾರಿಗೆ ವಿವೊ ಫೋನ್‌ ಬಳಸುವವರಿಗೆ ಇದು ಸ್ವಲ್ಪ ಗೊಂದಲ ಮೂಡಿಸುತ್ತದೆ.

ಕ್ಯಾಮೆರಾ

ಅಲ್ಟ್ರಾವೈಡ್‌, ಲ್ಯಾಂಡ್‌ಸ್ಕೇಪ್‌, ನೈಟ್‌ ಮೋಡ್‌ನಲ್ಲಿ ಉತ್ತಮ ಚಿತ್ರಗಳು ಮೂಡಿಬರುತ್ತವೆ. ಆದರೆ, ಪೋಟ್ರೇಟ್‌ ಅಷ್ಟೊಂದು ತೃಪ್ತಿ ನೀಡುವುದಿಲ್ಲ. ಮಂದ ಬೆಳಕಿನಲ್ಲಿ ಸೆಲ್ಫಿ ಸ್ಪಷ್ಟವಾಗಿ ಬರುವುದಿಲ್ಲ. ಜೂಮ್‌ ಆಯ್ಕೆಯೊಂದಿಗೆ ಚಿತ್ರಗಳನ್ನು ತೆಗೆದರೆ ಸ್ಪಷ್ಟತೆ ಇರುವುದಿಲ್ಲ. ಸೂಪರ್‌ ಮ್ಯಾಕ್ರೊ ಮೋಡ್ ಅತಿ ಸೂಕ್ಷ್ಮವಾದ ಅಂಶಗಳನ್ನು ಸೆರೆಹಿಡಿಯಲು ಸೂಕ್ತವಾಗಿದೆ.

ಪ್ರಮುಖ ಅಂಶಗಳು

ಅಲ್ಟ್ರಾ ಗೇಮ್‌ ಮೋಡ್‌, ಮೋಟರ್‌ಬೈಕ್‌ ಮೋಡ್‌ ಆಯ್ಕೆಗಳು ಉತ್ತಮವಾಗಿವೆ
ಅಗತ್ಯ ಇಲ್ಲದ ಕೆಲವು ಆ್ಯಪ್‌ಗಳನ್ನು ಅನ್‌ ಇನ್‌ಸ್ಟಾಲ್‌ ಮಾಡಲು ಸಾಧ್ಯವಿಲ್ಲ.
ಏಕಕಾಲಕ್ಕೆ ಎರಡು ಆ್ಯಪ್‌ಗಳ ಬಳಸುವ Split Screen ಆಯ್ಕೆ ಉತ್ತಮವಾಗಿ ಕೆಲಸ ಮಾಡುತ್ತದೆ

ವೈಶಿಷ್ಟ್ಯ

ಪರದೆ: 6.44 ಇಂಚು, ಅಲ್ಟ್ರಾ ಫುಲ್‌ವೀವ್‌ ಟಿಎಂ ಅಮೊಎಲ್‌ಇಡಿ ಡಿಸ್‌ಪ್ಲೇ
ಪ್ರೊಸೆಸರ್: ಸ್ನ್ಯಾಪ್‌ಡ್ರ್ಯಾಗನ್‌ 675ಎಐಇ ಆಕ್ಟಾ ಕೋರ್‌
ರ್‍ಯಾಮ್‌; 8 ಜಿಬಿ
ರೋಮ್;128 ಜಿಬಿ
ಬ್ಯಾಟರಿ;41,00 ಎಂಎಎಚ್‌
ಒಎಸ್‌; ಆಂಡ್ರಾಯ್ಡ್‌ 9 ಆಧಾರಿತ ಒಎಸ್‌ 9.1
ಫ್ರಂಟ್‌ ಕ್ಯಾಮೆರಾ;48+13+8+2ಎಂಪಿ
ಸೆಲ್ಫಿ; 32+8ಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.