ವಾಟ್ಸ್ಆ್ಯಪ್
ಚಿತ್ರ: WhatsApp
ಪ್ರತಿ ಬಾರಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಮೆಟಾ ಒಡೆತನದ ವಾಟ್ಸ್‌ಆ್ಯಪ್ ಬಳಕೆದಾರರ ಸ್ನೇಹಿ ಎಂದೆನಿಕೊಂಡಿದೆ. ಇದೀಗ ಚಾಟ್‌ನಲ್ಲಿರುವ ಪ್ರಮುಖ ಸಂದೇಶವನ್ನು ಪಿನ್ ಮಾಡುವ ಅವಕಾಶವನ್ನು ನೀಡುತ್ತಿದೆ. ಶೀಘ್ರದಲ್ಲಿ ಇದು ಬಳೆಕೆದಾರರಿಗೆ ಲಭ್ಯವಾಗಲಿದೆ.
ನಿನ್ನಯಷ್ಟೇ(ಡಿ.12) ಈ ಹೊಸ ಅಪ್‌ಡೇಟ್ ಬಗ್ಗೆ ಮಾಹಿತಿ ನೀಡಿರುವ ವಾಟ್ಸ್‌ಆ್ಯಪ್, ಚಾಟ್‌ನಲ್ಲಿರುವ ಪ್ರಮುಖ ಸಂದೇಶವನ್ನು ಹುಡುಕುವ ಕೆಲಸವನ್ನು ಬಳಕೆದಾರರಿಗೆ ತಪ್ಪಿಸಿದೆ.
ಹೌದು... ಇನ್ನು ಮುಂದೆ ಬಳಕೆದಾರರು ತಮಗೆ ಬೇಕಾದ ಮೆಸೇಜ್ ಅನ್ನು ಪಿನ್ ಮಾಡಬಹುದು. ಟೆಕ್ಸ್ಟ್ ಮೆಸೇಜ್‌ಗಳು, ಪೋಟೊಗಳು, ಇಮೋಜಿ ಹೀಗೆ ಎಲ್ಲ ರೀತಿಯ ಸಂದೇಶಗಳನ್ನು ಪಿನ್ ಮಾಡುವ ಅವಕಾಶವನ್ನು ವಾಟ್ಸ್‌ಆ್ಯಪ್ ನೀಡಿದೆ.
ಪಿನ್ ಮಾಡಿದ ಮೆಸೇಜ್‌ಗಳು ಚಾಟ್ ಬಾಕ್ಸ್‌ನ ಮೇಲೆ ಬ್ಯಾನರ್‌ನ ಹಾಗೆ ಕಾಣಿಸಿಕೊಳ್ಳುತ್ತದೆ. ಇದರಿಂದ ಬಳಕೆದಾರರಿಗೆ ಹುಡುಕುವ ಕೆಲಸ ತಪ್ಪುತ್ತದೆ. ಆದರೆ ಇಲ್ಲೊಂದು ಷರತ್ತಿದೆ. ಒಂದು ಬಾರಿಗೆ ಒಂದು ಸಂದೇಶವನ್ನು ಮಾತ್ರ ಪಿನ್ ಮಾಡಬಹುದು.
ಜಗತ್ತಿನ ಎಲ್ಲ ಬಳಕೆದಾರರಿಗೆ ಈ ಹೊಸ ಫೀಚರ್‌ರನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.
ಪಿನ್ ಮಾಡುವುದು ಹೇಗೆ?
ಚಾಟ್‌ನಲ್ಲಿ ‘ಪಿನ್’ ಮಾಡಬೇಕೆಂದುಕೊಂಡಿರುವ ಮೆಸೇಜ್ ಮೇಲೆ ಒತ್ತಿ ಹಿಡಿಯಬೇಕು. ಕಾನ್‌ಟೆಕ್ಟ್ಸ್ ಮೆನುವಿನಲ್ಲಿರುವ Pin ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಹೀಗೆ ಮಾಡಿದ ತಕ್ಷಣ ಆ ಸಂದೇಶ ಚಾಟ್ ಬಾಕ್ಸ್ ಮೇಲೆ ದೊಡ್ಡದಾಗಿ(ಬ್ಯಾನರ್ ಹಾಗೆ) ಕಾಣಿಸುತ್ತದೆ. ಪಿನ್ ಮಾಡಿದ ಸಂದೇಶ ಎಷ್ಟು ಗಂಟೆ ಅಥವಾ ಎಷ್ಟು ದಿನ ಇರಬೇಕು ಎಂಬುವುದನ್ನು ಕೂಡ ಬಳಕೆದಾರರು ನಿರ್ಧರಿಸಬಹುದು. 24 ಗಂಟೆ, 7 ದಿನ, 30 ದಿನ ಹೀಗೆ ಯಾವುದಾದರೊಂದರ ಮೇಲೆ ಕ್ಲಿಕ್ ಮಾಡಬಹುದು.
ಗ್ರೂಪ್ ಚಾಟ್‌ನಲ್ಲಿ ಅಡ್ಮಿನ್‌ಗೆ ಹೆಚ್ಚು ಅಧಿಕಾರವಿರುತ್ತದೆ. ಗ್ರೂಪ್‌ನ ಸದಸ್ಯರಿಗೆಲ್ಲರಿಗೂ ಸಂದೇಶಗಳನ್ನು ಪಿನ್ ಮಾಡುವ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುವುದನ್ನು ಅಡ್ಮಿನ್ ನಿರ್ಧರಿಸುತ್ತಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.