ADVERTISEMENT

ಭವಿಷ್ಯದ ತಂತ್ರಜ್ಞಾನದ ವಿನೂತನ ಪರಿಹಾರ ಐಡಿಯಾ: 3 ತಂಡಗಳಿಗೆ ₹1.5 ಕೋಟಿ ಗೆಲ್ಲುವ ಅವಕಾಶ

ಪ್ರಜಾವಾಣಿ ವಿಶೇಷ
Published 24 ಮೇ 2023, 14:47 IST
Last Updated 24 ಮೇ 2023, 14:47 IST
   

ಗುರುಗ್ರಾಮ: ಸ್ಯಾಮ್‌ಸಂಗ್‌ ಇಂಡಿಯಾದ ‘ರಾಷ್ಟ್ರೀಯ ಶಿಕ್ಷಣ ಮತ್ತು ನಾವೀನ್ಯತೆ ಸ್ಪರ್ಧೆ‘ ಅಡಿಯಲ್ಲಿ ‘ಭವಿಷ್ಯದ ತಂತ್ರಜ್ಞಾನದ ವಿನೂತನ ಪರಿಹಾರದ ಐಡಿಯಾ‘ ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. 

ಭಾರತದಾದ್ಯಂತ 50 ಸಾವಿರಕ್ಕೂ ಹೆಚ್ಚು ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. ದೇಶದ ಸಣ್ಣ ನಗರಗಳಾದ  ಬೆಗುಸರಾಯ್, ಚಿತ್ರದುರ್ಗ, ಧಾರವಾಡ, ಕಲಬುರ್ಗಿ, ಉತ್ತರ ಪರಗಣ ಜಿಲ್ಲೆಗಳಿಂದಲೂ ಯುವಕರು ನೋಂದಣಿ ಮಾಡಿಕೊಂಡು ತಮ್ಮ ಐಡಿಯಾಗಳನ್ನು ಕಳುಹಿಸಿಕೊಟ್ಟಿದ್ದಾರೆ. 

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅಗ್ರ 3 ತಂಡಗಳು ₹ 1.5 ಕೋಟಿ ಬಹಮಾನ ಪಡೆಯಲಿವೆ. 2023, ಮೇ 31ರಂದು ಸಂಜೆ 5 ಗಂಟೆಯ ಒಳಗೆ ನೋಂದಣಿ ಮಾಡಿಕೊಳ್ಳಬಹುದು.ನೋಂದಣಿ ಮಾಡಲು ಈ ಜಾಲತಾಣಕ್ಕೆ ಬೇಟಿ ನೀಡಬಹುದು. www.samsung.com/in

ADVERTISEMENT

16 ರಿಂದ 22 ವರ್ಷದೊಳಗಿನ ಯುವಕ/ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಶಿಕ್ಷಣ ಮತ್ತು ಕಲಿಕೆ, ಪರಿಸರ ಮತ್ತು ಸುಸ್ಥಿರತೆ, ಆರೋಗ್ಯ ಮತ್ತು ಸ್ವಾಸ್ಥ್ಯ ಹಾಗೂ ವೈವಿಧ್ಯತೆ ಎಂಬ 4 ಪ್ರಮುಖ ವಿಷಯಗಳ ಸುತ್ತ ಯುವಕರು ಹೊಸ ಐಡಿಯಾಗಳನ್ನು ಕಳುಹಿಸಿಕೊಡಬಹುದು. 

ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿ:  www.samsung.com/in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.