ADVERTISEMENT

ಬಿಟ್ಸ್‌ ಪಿಲಾನಿ ವಿದ್ಯಾರ್ಥಿಗಳ ‘ರೋವರ್‌’ಗೆ ನಾಸಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ

ಪಿಟಿಐ
Published 9 ಮೇ 2023, 15:46 IST
Last Updated 9 ಮೇ 2023, 15:46 IST
‘ರೋವರ್‌
‘ರೋವರ್‌   

ನವದೆಹಲಿ (ಪಿಟಿಐ): ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ‘ನಾಸಾ’ ಏರ್ಪಡಿಸಿದ್ದ ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕಳಿಸುವಂಥ ಮಾನವ ಚಾಲಿತ ‘ರೋವರ್‌’ ಅಭಿವೃದ್ಧಿ ಸ್ಪರ್ಧೆಯಲ್ಲಿ ರಾಜಸ್ಥಾನದ ಬಿಟ್ಸ್‌ ಪಿಲಾನಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಮೊದಲ ಸ್ಥಾನ ಗಳಿಸಿದೆ ಎಂದು ವಿ.ವಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಅಲಬಾಮದ ನಾಸಾ ಮಾರ್ಷಲ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ನಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಂಗಳ ಗ್ರಹದ ಮೇಲಿನ ಮಾರ್ಟಿನ್‌ ಟೆರೈನ್‌ಗಳ (ಬೃಹದಾಕಾರದ ಕುಳಿಗಳನ್ನು ಹೊಂದಿರುವ ಮಂಗಳ ಗ್ರಹದ ಮೇಲ್ಮೈ ಪ್ರದೇಶ) ಮೇಲೂ ಸಂಚರಿಸಬಲ್ಲ ಸಾಮರ್ಥ್ಯದ ಮಾನವ ಚಾಲಿತ ರೋವರ್‌ಗಳನ್ನು ಅಭಿವೃದ್ಧಿಪಡಿಸುವುದು ಸ್ಪರ್ಧೆಯ ಸವಾಲಾಗಿತ್ತು. ವಿ.ವಿ.ಯ ‘ಇನ್ಸ್‌ಪೈರ್ಡ್‌ ಕಾರ್ಟೆರ್ಸ್‌ ಗ್ರಾವಿಟಿ’ ತಂಡವು ಸ್ಪರ್ಧೆಯ ಯೋಜನೆ ಪರಿಶೀಲನೆ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು ಎಂದು ಹೇಳಿದ್ದಾರೆ.

ತಂಡ ಅಭಿವೃದ್ಧಿಪಡಿಸಿದ್ದ ‘ಜಿ–ರೋವರ್‌ 3’ ಹಲವಾರು ವಿಶಿಷ್ಟ ಲಕ್ಷಣಗಳು ಇದ್ದ ಕಾರಣ ಸ್ಪರ್ಧೆಯಲ್ಲಿ ಬಹುವಾಗಿ ಗಮನ ಸೆಳೆಯಿತು ಎಂದು ಅವರು ಹೇಳಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.