ಚೆನ್ನೈ: ಅಂತರಿಕ್ಷದಲ್ಲಿ ಜೋಡಣೆ ಪ್ರಯೋಗದ (ಸ್ಪೇಡೆಕ್ಸ್) ಭಾಗವಾಗಿ ಉಡ್ಡಯನ ಮಾಡಲಾಗಿರುವ ಎರಡು ಉಪಗ್ರಹಗಳ ನಡುವಿನ ಅಂತರವನ್ನು 230 ಮೀಟರ್‌ಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾಗಿ ಇಸ್ರೊ ಶನಿವಾರ ತಿಳಿಸಿದೆ.
ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ, ಮುಂದಿನ ಕೆಲವೇ ದಿನಗಳಲ್ಲಿ ಉಪಗ್ರಹಗಳ ಜೋಡಣೆ (ಡಾಕಿಂಗ್) ಪ್ರಯೋಗವನ್ನು ಕಾರ್ಯಗತಗೊಳಿಸಲಾಗುವುದು ಎಂದೂ ತಿಳಿಸಿದೆ.
‘ಎಲ್ಲ ಸಂವೇದಕಗಳ ಪರಿಶೀಲನೆ ನಡೆಸಲಾಗುತ್ತಿದೆ. ಉಪಗ್ರಹಗಳು ಕೂಡ ಸುಸ್ಥಿತಿಯಲ್ಲಿವೆ’ ಎಂದು ಹೇಳಿದೆ.
ಶುಕ್ರವಾರ ರಾತ್ರಿ, ಈ ಎರಡು ಉಪಗ್ರಹಗಳ ನಡುವಿನ ಅಂತರವನ್ನು 1.5 ಕಿ.ಮೀ. ಇರುವಂತೆ ಕ್ರಮ ಕೈಗೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.