ADVERTISEMENT

ಇಂದು ಮಧ್ಯರಾತ್ರಿ ಭೂಮಿಯ ಸಮೀಪಕ್ಕೆ ಬರಲಿದೆ ಮಂಗಳ ಗ್ರಹ!

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 4:55 IST
Last Updated 31 ಜುಲೈ 2018, 4:55 IST
ಮಂಗಳ ಗ್ರಹ (ಕೃಪೆ: ನಾಸಾ)
ಮಂಗಳ ಗ್ರಹ (ಕೃಪೆ: ನಾಸಾ)   

ಬೆಂಗಳೂರು: ಇಂದು ರಾತ್ರಿ ಮಂಗಳ ಗ್ರಹ ಭೂಮಿಯ ಸಮೀಪಕ್ಕೆ ಬರಲಿದೆ.ಭೂಮಿಯಿಂದ 57.6 ಮಿಲಿಯನ್ ಕಿ.ಮೀದೂರದಲ್ಲಿ ಮಂಗಳ ಗ್ರಹ ಕಾಣಿಸಿಕೊಳ್ಳಲಿದ್ದು, ಕಳೆದ 15 ವರ್ಷದ ಅವಧಿಯಲ್ಲಿ ಇಂದು ಮಧ್ಯರಾತ್ರಿಮಂಗಳ ಗ್ರಹ ಭೂಮಿಗೆ ಹತ್ತಿರವಾಗಲಿದೆ.

ಕಳೆದ ವಾರದಿಂದಲೇ ಮಂಗಳವು ಹೆಚ್ಚು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸತೊಡಗಿತ್ತು.ಭೂಮಿ ಹಾಗೂ ಮಂಗಳ ಗ್ರಹಗಳ ನಡುವಿನ ಅಂತರ ಜುಲೈ31ರಂದು ಕಡಿಮೆ ಇರುವ ಕಾರಣ ಮಂಗಳ ಗ್ರಹ ಪ್ರಕಾಶಮಾನವಾಗಿರುತ್ತದೆ.

ಮಂಗಳ ಗ್ರಹವು ಭೂಕಕ್ಷೆ ಬಳಿ ಬಂದಾಗ, ಸೂರ್ಯಾಸ್ತದ ವೇಳೆಗೆ ಮಂಗಳ ಗ್ರಹದ ಉದಯವಾಗುತ್ತದೆ. ಹಾಗೆಯೇ ಸೂರ್ಯೋದಯದ ವೇಳೆಗೆ ಮಂಗಳ ಅಸ್ತಮಿಸುತ್ತದೆ. ಹಾಗಾಗಿ ಮಧ್ಯರಾತ್ರಿ ಆಕಾಶದಲ್ಲಿ ಈ ಕೌತುಕವನ್ನು ಕಾಣಬಹುದಾಗಿದೆ.

ADVERTISEMENT

ಆಗಸ್ಟ್ ತಿಂಗಳ ಆರಂಭದಲ್ಲಿ ಮಂಗಳ ಗ್ರಹ ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಆಗಸದಲ್ಲಿನ ಕೌತುಕ ನೋಡಲು ಇಲ್ಲಿಕ್ಲಿಕ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.