ADVERTISEMENT

‘ಟಚ್ ದಿ ಸನ್’ ಯೋಜನೆ: ಬಾಹ್ಯಾಕಾಶ ನೌಕೆ ಉಡಾವಣೆಗೆ ಕೌಂಟ್ ಡೌನ್ ಆರಂಭಿಸಿದ ನಾಸಾ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2018, 15:32 IST
Last Updated 10 ಆಗಸ್ಟ್ 2018, 15:32 IST
   

ತಂಪಾ(ಫ್ಲೋರಿಡಾ): ಸೂರ್ಯನ ವಾತಾವರಣವನ್ನು ಅಧ್ಯಯನ ಮಾಡುವ ಸಲುವಾಗಿ ನಾಸಾ ಆರಂಭಿಸಿರುವ ₹ 10 ಸಾವಿರ ಕೋಟಿ ವೆಚ್ಚದ ‘ಟಚ್‌ ದಿ ಸನ್‌’ ಯೋಜನೆಯ ಮೊದಲ ಬಾಹ್ಯಾಕಾಶ ನೌಕೆ ಉಡಾವಣೆಗೆ ಕೌಂಟ್‌ ಡೌನ್‌ ಶುರುವಾಗಿದೆ.

ಪಾರ್ಕರ್‌ ಸೋಲಾರ್‌ ಪ್ರೋಬ್‌ ಹೆಸರಿನ ನೌಕೆಯನ್ನು ಹೊತ್ತೊಯ್ಯಲಿರುವ ಡೆಲ್ಟಾ–IV ನೌಕೆಯನ್ನು ಶನಿವಾರ ಮುಂಜಾನೆ ಉಡಾಯಿಸಲು ಫ್ಲೋರಿಡಾಡಕೇಪ್‌ ಕ್ಯಾನಾವೆರಲ್‌ನಲ್ಲಿ ವೇದಿಕೆ ಸಜ್ಜಾಗಿದೆ.

‘ಮುಂಜಾನೆ 3.33 ಗಂಟೆಗೆ ಆರಂಭವಾಗಲಿರುವ ಈ ಉಡಾವಣೆಯ ಅವಧಿ65 ನಿಮಿಷಗಳದ್ದಾಗಿದ್ದು, ನೌಕೆಯು ಕಕ್ಷೆಗೆ ಸೇರಲು ಬೇಕಾದ ಶೇ. 70ರಷ್ಟು ಅನುಕೂಲಕರ ವಾತಾವರಣವಿದೆ’ ಎಂದು ನಾಸಾ ಹೇಳಿಕೊಂಡಿದೆ.

ADVERTISEMENT

ಸೂರ್ಯನಪ್ರಭಾವಲಯ ಹಾಗೂ ಸುರ್ಯನ ಸುತ್ತಲಿನ ವಾತಾವರಣದ ಅಧ್ಯಯನವೇ ಈ ಯೋಜನೆಯಮುಖ್ಯ ಉದ್ದೇಶವಾಗಿದೆ.

‘ಪಾರ್ಕರ್‌ ಸೋಲಾರ್‌ ಅಧ್ಯಯನವು, ಸೌರವ್ಯೂಹದಲ್ಲಿ ಭೂಮಿಗೆ ಯಾವಾಗ ಅಪಾಯ ಒದಗಬಹುದು ಎಂಬುದನ್ನು ಅಂದಾಜಿಸಲು ನೆರವಾಗಲಿದೆ’ ಎಂದು ಅಧ್ಯಯನ ತಂಡದಲ್ಲಿರುವ ವಿಜ್ಞಾನಿ ಹಾಗೂ ಮಿಚಿಗನ್‌ ವಿವಿಯ ಪ್ರೊಫೆಸರ್‌ ಜಸ್ಟೀನ್‌ ಕಾಸ್ಪೆರ್‌ ಹೇಳಿದ್ದಾರೆ.

‘ಸೂರ್ಯನ ಸಮೀಪಕ್ಕೆಈ ಹಿಂದೆ ಯಾವ ಉಪಗ್ರಹವೂ ತಲುಪದಷ್ಟು ಸಮೀಪಕ್ಕೆ ನಾವು ತಲುಪಲಿದ್ದೇವೆ. ಪ್ರತಿಯೊಂದು ಆಕಾಶಕಾಯವನ್ನು ಸೂರ್ಯನ ವಾತಾವರಣದಿಂದ ನೋಡಲಿದ್ದೇವೆ. ಈ ಮೂಲಕ ದಶಕಗಳಿಂದ ನಾವು ಬಯಸಿದ್ದ ನಕ್ಷತ್ರಗಳ ಕುರಿತ ಹೊಸ ಜ್ಞಾನ ಹಾಗೂ ಅನುಭವವನ್ನು ಪಡೆಯಲಿದ್ದೇವೆ’ ಎಂದು ಅಧ್ಯಯನ ತಂಡದಲ್ಲಿರುವ ಮತ್ತೊಬ್ಬ ವಿಜ್ಞಾನಿ ನಿಕೋಲಾ ಫಾಕ್ಸ್‌ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.