ಕೃಷ್ಣ
ಬೆಂಗಳೂರು: ಇಂಟರ್‌ನೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರ ಗಮನ ಸೆಳೆದಿದ್ದ ‘ಫೋಟೊಶಾಪ್’ ಕಲಾವಿದ, ಮಿಮ್‌ಗಳ ರಚನಾ ಕಲಾವಿದ ಪಿ.ಎಸ್. ಕೃಷ್ಣಾ (atheist krishna) ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.
ಅವರು ಹೈದರಾಬಾದ್ ಮೂಲದವರು ಎನ್ನಲಾಗಿದೆ.
ಕೃಷ್ಣ ಅವರು ಇತ್ತೀಚೆಗೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರ ಹೇಳಿಕೆ ಉಲ್ಲೇಖಿಸಿ ದಿ ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ.
ಕೋವಿಡ್ ಸಮಯದಲ್ಲಿ ಇಂಟರ್‌ನೆಟ್‌ನಲ್ಲಿ ಕಾಲ್ಪನಿಕ ಫೋಟೊಶಾಪ್ ಫೋಟೊಗಳನ್ನು ಸೃಜಿಸಿ ನವೀರು ಹಾಸ್ಯದ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಿದ್ದರು. ಮೋದಿ ಅವರಿಗೆ ಸಂಬಂಧಿಸಿದ ಅನೇಕ ಫೋಟೊಗಳನ್ನು ಅವರು ಸೃಷ್ಟಿಸಿ ಸ್ವತಃ ಮೋದಿ ಅವರಿಂದಲೇ ಮೆಚ್ಚುಗೆ ಪಡೆದಿದ್ದರು.
ಇಂತಹ ಕಲ್ಪನೆಯ ಫೋಟೊಗಳನ್ನು ಮಾಡಿಕೊಡಿ ಎಂದು ಯಾರಾದರೂ ಇಂಟರ್‌ನೆಟ್‌ನಲ್ಲಿ ಅವರನ್ನು ಟ್ಯಾಗ್ ಮಾಡಿ ಕೇಳಿದರೆ ಅದ್ಭುತ ಎನ್ನುವಂತೆ ಫೋಟೊಗಳನ್ನು ಮಾಡಿ ಕೊಟ್ಟು ಅವರು ಬಾಲಿವುಡ್ ನಟ–ನಟಿಯರಿಂದಲೂ ಮೆಚ್ಚುಗೆ ಪಡೆದಿದ್ದರು.
ರಾಜಕೀಯ, ಸಿನಿಮಾಕ್ಕೆ ಸಂಬಂಧಿಸಿದ ಮಿಮ್‌ಗಳನ್ನು ರಚಿಸುವಲ್ಲಿ ಅವರು ನಿಷ್ಣಾತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.