ADVERTISEMENT

ಟ್ವಿಟರ್ ಪಕ್ಷಿಯ ಆಕೃತಿ ₹8.13 ಕೋಟಿಗೆ ಸೇಲ್

twitter

ಏಜೆನ್ಸೀಸ್
Published 19 ಜನವರಿ 2023, 9:15 IST
Last Updated 19 ಜನವರಿ 2023, 9:15 IST
ಟ್ವಿಟರ್
ಟ್ವಿಟರ್   

ಸ್ಯಾನ್‌ಫ್ರಾನ್ಸಿಸ್ಕೊ: ಇಲ್ಲಿನ ಟ್ವಿಟರ್ ಮುಖ್ಯ ಕಚೇರಿಯಲ್ಲಿನ ಪೀಠೋಪಕರಣ, ಅಲಂಕಾರಿಕ ವಸ್ತುಗಳು ಮತ್ತು ಅಡುಗೆ ಉಪಕರಣಗಳನ್ನು ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಹರಾಜು ಹಾಕಿದ್ದು, ಟ್ವಿಟರ್ ಬರ್ಡ್ ಆಕೃತಿ ₹8,13,49,350ಗೆ(1 ಮಿಲಿಯನ್ ಡಾಲರ್) ಸೇಲ್ ಆಗಿದೆ.

ಟ್ವಿಟರ್‌ನ ಕಾರ್ಪೊರೇಟ್ ಕಚೇರಿ ಆಸ್ತಿಗಳ ಆನ್‌ಲೈನ್ ಹರಾಜಿನಲ್ಲಿ, ಟ್ವಿಟರ್‌ನ ಪಕ್ಷಿ ಲೋಗೊ ಆಕಾರದ 10 ಅಡಿಯ ನಿಯಾನ್ ಲೈಟ್ ಕೂಡ ಸೇರಿದೆ. ಇದು ₹32,53,974(40,000 ಡಾಲರ್) ಮೊತ್ತಕ್ಕೆ ಬಿಕರಿಯಾಗಿದೆ ಎಂದು ಹೆರಿಟೇಜ್ ಗ್ಲೋಬಲ್ ಪಾರ್ಟ್‌ನರ್ಸ್ ಬಿಡ್ಡಿಂಗ್ ಸರ್ವಿಸ್ ದೃಢಪಡಿಸಿದೆ.

631 ವಸ್ತುಗಳ ಹರಾಜಿನಲ್ಲಿ ಎಸ್‌ಪ್ರೆಸ್ಸೊ ಮೆಶಿನ್, ಟಿವಿ, ಚಾರ್ಜಿಂಗ್ ಸ್ಟೇಶನ್, ಪಿಜ್ಜಾ ಓವನ್, ‘@’ಮಾದರಿಯ ಡೆಕೊರೇಟಿವ್ ಪ್ಲಾಂಟರ್ ಸಹ ಇತ್ತು.

ADVERTISEMENT

ಕಂಪನಿಯ ಆರ್ಥಿಕ ಸಮಸ್ಯೆಗೆ ಉದ್ಯೋಗ ಕಡಿತದಿಂದ ಪರಿಹಾರ ಸಿಕ್ಕಿದೆ ಎಂದು ಎಲಾನ್ ಮಸ್ಕ್ ಡಿಸೆಂಬರ್‌ನಲ್ಲಿ ಹೇಳಿದ್ದರು. ತಮ್ಮ ಒಡೆತನದ ಟ್ವಿಟರ್‌ಗೆ ಅವರು ನೂತನ ಸಿಇಓ ಹುಡುಕಾಟದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.