ADVERTISEMENT

ಬಟರ್‌ ಚಿಕನ್‌ಗೆ ಮನಸೋತ ಟ್ವಿಟರ್‌ ಒಡೆಯ

ಐಎಎನ್ಎಸ್
Published 16 ಮೇ 2023, 10:43 IST
Last Updated 16 ಮೇ 2023, 10:43 IST
ಎಲಾನ್‌ ಮಸ್ಕ್‌
ಎಲಾನ್‌ ಮಸ್ಕ್‌   

ಪ್ರಪಂಚದಾದ್ಯಂತ ಭಾರತೀಯ ಖಾದ್ಯಗಳು ಅಪಾರ ಖ್ಯಾತಿ ಗಳಿಸಿವೆ. ಟ್ವಿಟರ್‌ ಒಡೆಯ ಎಲಾನ್‌ ಮಸ್ಕ್ ಕೂಡಾ ಭಾರತೀಯ ಖಾದ್ಯಗಳಾದ ಬಟರ್‌ ಚಿಕನ್‌ ಮತ್ತು ನಾನ್‌ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ ಬಳಕೆದಾರ ಡೇನಿಯಲ್‌ ಎಂಬುವವರು ಉತ್ತರ ಭಾರತದ ಜನಪ್ರಿಯ ಆಹಾರವಾದ ಬಟರ್‌ ಚಿಕನ್‌ ಮತ್ತು ನಾನ್‌ ಅನ್ನು ಪೋಸ್ಟ್‌ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಸಾಮಾನ್ಯವಾಗಿ ಭಾರತೀಯ ಖಾದ್ಯಗಳನ್ನು ನಾನು ಇಷ್ಟಪಡುತ್ತೇನೆ. ಇದು(ಬಟರ್‌ ಚಿಕನ್‌–ನಾನ್‌) ತುಂಬಾ ಚೆನ್ನಾಗಿದೆ‘ ಎಂದು ಟ್ವೀಟ್‌ ಮಾಡಿದ್ದರು.

ಡೇನಿಯಲ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಎಲಾನ್‌ ಮಸ್ಕ್, ‘ಟ್ರೂ (ಸತ್ಯ)‘ ಎಂದು ಹೇಳಿದ್ದಾರೆ.

ADVERTISEMENT

ಎಲಾನ್‌ ಮಸ್ಕ್‌ ಅವರ ಪ್ರತಿಕ್ರಿಯೆ ನೋಡಿ ಹಲವಾರು ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದ ವಿಶೇಷ ಖಾದ್ಯವೆಂದು ತಿಳಿಸಿದ್ದಾರೆ. ಬಾಲಿವುಡ್ ನಟ ರಣವೀರ್ ಶೋರೆ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿ, ‘ಭಾರತೀಯ ಆಹಾರ ಪದ್ಧತಿಯು ವಿಶ್ವದಲ್ಲೇ ಅತ್ಯಂತ ವೈವಿಧ್ಯಮಯ ಹಾಗೂ ವಿಶಿಷ್ಟವಾಗಿದೆ‘ ಎಂದು ಹೇಳಿದ್ದಾರೆ.

ಟ್ವೀಟ್‌ ಪೋಸ್ಟ್‌ ಮಾಡಿದ ಮೂರು ಗಂಟೆಗಳಲ್ಲೇ 1.7 ಮಿಲಿಯನ್ ವೀಕ್ಷಣೆ, 21,400 ಲೈಕ್ಸ್‌ ಮತ್ತು 1,206 ರಿಟ್ವೀಟ್‌ ಆಗಿದೆ.

ಇತ್ತೀಚೆಗೆ ಆ್ಯಪಲ್ ಸಿಇಓ ಟಿಮ್‌ ಕುಕ್‌ ಮುಂಬೈನ ಹೋಟೆಲ್‌ವೊಂದರಲ್ಲಿ ‘ವಡಾ ಪಾವ್‌‘ ತಿಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.