ADVERTISEMENT

‘ಕ್ಯುಆನನ್‘ ಪ್ರತಿನಿಧಿಸುವ ಗುಂಪು, ಪೇಜ್‌, ಖಾತೆ ನಿಷೇಧಕ್ಕೆ ಫೇಸ್‌ಬುಕ್ ನಿರ್ಧಾರ

ಹಿಂಸಾರಕ್ಕೆ ಪ್ರಚೋದನೆ, ರಾಜಕೀಯನಾಯಕರನ್ನು ಕೆಟ್ಟದಾಗಿ ಬಿಂಬಿಸುವ ಆರೋಪ

ಏಜೆನ್ಸೀಸ್
Published 7 ಅಕ್ಟೋಬರ್ 2020, 8:39 IST
Last Updated 7 ಅಕ್ಟೋಬರ್ 2020, 8:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಒಕ್ಲಾಂಡ್‌: ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ‘ಕ್ಯುಆನನ್‌ ಗುಂಪನ್ನು‘ ಪ್ರತಿನಿಧಿಸುವ ಫೇಸ್‌ಬುಕ್‌ ಪೇಜ್‌, ಇನ್‌ಸ್ಟಾಗ್ರಾಂನ ಎಲ್ಲ ಖಾತೆಗಳನ್ನು ತೆಗೆದು ಹಾಕುವುದಾಗಿ ಜನಪ್ರಿಯ ಜಾಲತಾಣ ಫೇಸ್‌ಬುಕ್‌ ತಿಳಿಸಿದೆ.

ಹಿಂಸಾಚಾರ ಉತ್ತೇಜಿಸದಿದ್ದರೂ, ‘ಕುಆನನ್‌‘ ಪ್ರತಿನಿಧಿಸುತ್ತಿರುವ ಎಲ್ಲ ಫೇಸ್‌ಬುಕ್‌ ಪೇಜ್‌, ಗುಂಪುಗಳು ಮತ್ತು ಇನ್‌ಸ್ಟಾಗ್ರಾಂ ಖಾತೆ ತೆಗೆದು ಹಾಕುವುದಾಗಿ ಮಂಗಳವಾರ ಫೇಸ್‌ಬುಕ್‌ ತಿಳಿಸಿದೆ.

ಡೊನಾಲ್ಡ್‌ ಟ್ರಂಪ್ ಸೇರಿದಂತೆ ಹಲವು ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಜನಪ್ರಿಯ ವ್ಯಕ್ತಿಗಳನ್ನು ಕೆಟ್ಟದಾಗಿ ಬಿಂಬಿಸುವ, ಜತೆಗೆ, ಹಿಂಸಾಚಾರಕ್ಕೂ ಪ್ರಚೋದನೆ ನೀಡುವಂತಹ ಈ ಗುಂಪಿನ ಮೇಲೆ ನಿಷೇಧ ಹೇರುವುದಾಗಿಯೂ ತಿಳಿಸಿದೆ.

ADVERTISEMENT

ಒಂದು ಗುಂಪು ತನ್ನ ಹೆಸರು, ಜೀವನಚರಿತ್ರೆ ಅಥವಾ ಪುಟದ ಕುರಿತು ಪರಿಚಯಿಸಿಕೊಳ್ಳುವ ವಿಭಾಗ ಮತ್ತು ಪುಟ, ಗುಂಪು ಅಥವಾ ಇನ್‌ಸ್ಟಾಗ್ರಾಮ್ ಖಾತೆಯೊಳಗಿನ ಚರ್ಚೆಗಳು ಸೇರಿದಂತೆ ನಿಷೇಧದ ಮಾನದಂಡಗಳಿಗೆ ಒಳಪಡುತ್ತದೆಯೇ ಎಂದು ನಿರ್ಧರಿಸುವಂತಹ ಅಂಶಗಳನ್ನು ಪರಿಗಣಿಸಲಾಗುವುದು ಎಂದು ಸಾಮಾಜಿಕ ಜಾಲತಾಣ ದಿಗ್ಗಜ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.