ADVERTISEMENT

ಟ್ವಿಟರ್‌ನಿಂದ ನಿಯಮ ಉಲ್ಲಂಘನೆ: ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥನಿಂದ ದೂರು

ಏಜೆನ್ಸೀಸ್
Published 23 ಆಗಸ್ಟ್ 2022, 20:22 IST
Last Updated 23 ಆಗಸ್ಟ್ 2022, 20:22 IST
   

ವಾಷಿಂಗ್ಟನ್‌: ‘ಟ್ವಿಟರ್‌ ಸಂಸ್ಥೆಯು ಸೈಬರ್‌ ಸುರಕ್ಷತಾ ಕ್ರಮಗಳು ಹಾಗೂ ನಕಲಿ ಖಾತೆ ನಿರ್ವಹಣೆ ವಿಚಾರದಲ್ಲಿ ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಯಂತ್ರಕರಿಗೆ ತಪ್ಪು ಮಾಹಿತಿ ನೀಡಿ ಅವುಗಳ ದಾರಿ ತಪ್ಪಿಸಿದೆ’ ಎಂದು ಟ್ವಿಟರ್‌ನ ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥ ಪೀಟರ್‌ ಜಾಟ್ಕೊ ಆರೋಪಿಸಿದ್ದಾರೆ.

ಈ ಸಂಬಂಧ ಪೀಟರ್‌ ಅವರುಅಮೆರಿಕದ ಭದ್ರತಾ ಮತ್ತು ಷೇರು ವಿನಿಮಯ ಆಯೋಗ, ಫೆಡರಲ್‌ ಟ್ರೇಡ್‌ ಕಮಿಷನ್‌ (ಎಫ್‌ಟಿಸಿ) ಮತ್ತು ನ್ಯಾಯಾಂಗ ಇಲಾಖೆಗೆ ಹೋದ ತಿಂಗಳು ದೂರು ನೀಡಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ಹಾಗೂ ಸಿಎನ್‌ಎನ್‌ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸುರಕ್ಷತೆಗೆ ಸಂಬಂಧಿಸಿದಂತೆ ತಾನು
ಪ್ರಬಲ ಕ್ರಮಗಳನ್ನು ಅನುಸರಿಸುತ್ತಿರು
ವುದಾಗಿ ಹೇಳಿರುವ ಟ್ವಿಟರ್‌ ಸಂಸ್ಥೆ
ಯು, ಆ ಮೂಲಕ ಎಫ್‌ಟಿಸಿಯ ನಿಯಮ
ಗಳನ್ನು ಉಲ್ಲಂಘಿಸಿದೆ ಎಂಬ ಆರೋಪ
ವನ್ನೂ ಪೀಟರ್‌ ಮಾಡಿದ್ದಾರೆ. ಟ್ವಿಟರ್ ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಮನಗಂಡ ಎಲಾನ್‌ ಮಸ್ಕ್‌ ಸಂಸ್ಥೆಯನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಂದೆ ಸರಿದರು ಎಂದೂ ಪೀಟರ್‌ ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.