ADVERTISEMENT

ಟ್ವಿಟರ್‌ನಲ್ಲಿ ಮತ್ತೆ ಉದ್ಯೋಗ ಕಡಿತ: ಕೆಲಸ ಕಳೆದುಕೊಂಡ 200 ಉದ್ಯೋಗಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2023, 6:36 IST
Last Updated 27 ಫೆಬ್ರುವರಿ 2023, 6:36 IST
   

ವಾಷಿಂಗ್ಟನ್: ಪ್ರಸಿದ್ಧ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್, ಉದ್ಯೋಗ ಕಡಿತವನ್ನು ಮುಂದುವರಿಸಿದ್ದು, ಶನಿವಾರ ರಾತ್ರಿ ಮತ್ತೆ 200 ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಕ್ಟೋಬರ್‌ನಲ್ಲಿ ಎಲಾನ್ ಮಸ್ಕ್, ಟ್ವಿಟರ್ ಅನ್ನು ಖರೀದಿಸಿದ ಬಳಿಕ ವೆಚ್ಚ ತಗ್ಗಿಸುವ ಕಾರಣ ನೀಡಿ ಉದ್ಯೋಗ ಕಡಿತ ಆರಂಭಿಸಿದ್ದಾರೆ.

ಆಂತರಿಕ ಸಂದೇಶ ಸೇವೆ ಸ್ಲ್ಯಾಕ್ ಅನ್ನು ಸ್ಥಗಿತಗೊಳಿಸಿ, ಉದ್ಯೋಗಿಗಳು ಪರಸ್ಪರ ಸಂಪರ್ಕ ಸಾಧಿಸುವುದಕ್ಕೆ ತಡೆ ಹಾಕಿದ್ದ ಟ್ವಿಟರ್ ಆಡಳಿತ ಮಂಡಳಿ, ಅದಾದ ಒಂದು ವಾರದ ಬಳಿಕ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.

ADVERTISEMENT

ಶನಿವಾರ ರಾತ್ರಿ ಕಾರ್ಪೊರೇಟ್ ಇಮೇಲ್, ಲ್ಯಾಪ್‌ಟಾಪ್‌ಗಳು ಇದ್ದಕ್ಕಿದ್ದಂತೆ ಲಾಗೌಟ್ ಆಗುವ ಮೂಲಕ ಉದ್ಯೋಗ ಕಡಿತದ ಸೂಚನೆ ಸಿಕ್ಕಿತ್ತು ಎಂದು ಕೆಲವರು ಹೇಳಿದ್ದಾರೆ. ಭಾನುವಾರ ಬೆಳಿಗ್ಗೆ ಉದ್ಯೋಗ ಕಡಿತದ ವ್ಯಾಪ್ತಿ ಸ್ಪಷ್ಟವಾಗಿದೆ. ಉದ್ಯೋಗ ಕಳೆದುಕೊಂಡ ಬಳಿಕ ಕೆಲವರು ಟ್ವಿಟರ್‌ನಲ್ಲೇ ಮಾಹಿತಿ ಹಂಚಿಕೊಂಡಿದ್ದಾರೆ.

ಮೆಶಿನ್ ಲರ್ನಿಂಗ್ ಮತ್ತು ಸೈಟ್ ರಿಲಯಬಿಲಿಟಿ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಪ್ರಾಡಕ್ಟ್ ಮ್ಯಾನೇಜರ್‌ಗಳು, ಡೇಟಾ ಸೈಂಟಿಸ್ಟ್ಸ್, ಮತ್ತು ಎಂಜಿನಿಯರ್‌ಗಳ ಉದ್ಯೋಗ ಕಡಿತ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.