
ಚಿತ್ರಕೃಪೆ: Insta/Albeli Ritu
ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು(ಎನ್‌ಆರ್‌ಐ) ಭಾರತಕ್ಕೆ ಮರಳದಿರಲು ಕಾರಣವೇನು ಎಂಬ ಬಗ್ಗೆ ಕಟೆಂಟ್ ಕ್ರಿಯೇಟರ್‌ರೊಬ್ಬರು ಮಾಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಎನ್‌ಆರ್‌ಐಗಳನ್ನು ಮಾತನಾಡಿಸಿರುವ ಕಟೆಂಟ್ ಕ್ರಿಯೇಟರ್ ಅಲ್ಬೆಲಿ ರಿತು, ಭಾರತಕ್ಕೆ ಮರಳದಿರಲು ಕಾರಣವೇನು? ಎಂದು ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಎನ್‌ಆರ್‌ಐಗಳು ನೀಡಿದ ಉತ್ತರ ಆತಂಕಕಾರಿಯಾಗಿದೆ.
ಅಮೆರಿಕದಲ್ಲಿರುವ ಬದುಕುವ ಸ್ವಾತಂತ್ರ್ಯ, ಮೂಲಸೌಕರ್ಯವನ್ನು ಹೊಗಳಿರುವ ಅನಿವಾಸಿ ಭಾರತೀಯರು, ಭಾರತಕ್ಕೆ ಮರಳದಿರಲು ಅಲ್ಲಿರುವ ಕೆಟ್ಟ ವ್ಯವಸ್ಥೆ, ಮೂಲಸೌಕರ್ಯ ಮತ್ತು ನಾಗರಿಕ ಪ್ರಜ್ಞೆ ಕೊರತೆ ಬಗ್ಗೆ ಬೊಟ್ಟು ಮಾಡಿ ತೋರಿಸಿದ್ದಾರೆ.
ಮಹಿಳಾ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಈ ಸಮಸ್ಯೆಯಿಂದಲೇ ಹೆಚ್ಚಿನ ಎನ್‌ಆರ್‌ಐಗಳು ಭಾರತಕ್ಕೆ ಮರಳಲು ಹಿಂಜರಿಯುತ್ತಾರೆ ಎಂದು ಹೇಳಿದ್ದಾರೆ.
ಎನ್‌ಆರ್‌ಐಗಳು ಹೇಳಿದಿಷ್ಟು:
ಅಮೆರಿಕದಲ್ಲಿ ಖಾಸಗಿತನಕ್ಕೆ ಕೊಡುತ್ತಿರುವ ಮಹತ್ವವನ್ನು ಎತ್ತಿ ತೋರಿಸಿರುವ ಅವರು, ಭಾರತದಲ್ಲಿ ವೈಯಕ್ತಿಕ ಗೋಪ್ಯತೆ ಎಂಬುದು ಮಾತಿಗಷ್ಟೇ ಎಂದಿದ್ದಾರೆ. ಭಾರತದಲ್ಲಿರುವ ಜನರು ತುಂಬಾ ಜಡ್ಜ್‌ಮೆಂಟಲ್ ಎಂದು ಹೇಳಿರುವ ಅವರು, ಅಮೆರಿಕದಲ್ಲಿ ಅಭಿಪ್ರಾಯಗಳನ್ನು ಗೌರವಿಸುತ್ತಾರೆ ಎಂದಿದ್ದಾರೆ.
ಉಡುಗೆ ತೊಡುಗೆ ವಿಚಾರದಲ್ಲಿಯೂ ಅಮೆರಿದಕದಲ್ಲಿ ಹೆಚ್ಚು ಸ್ವಾತಂತ್ರ್ಯವಿದ್ದು, ಮಹಿಳೆಯರಿಗೆ ಅಮೆರಿಕದ ಬಗ್ಗೆ ಒಲವು ಹೆಚ್ಚಲು ಕಾರಣವಾಗಿದೆ ಎಂದಿದ್ದಾರೆ.
ಅಮೆರಿಕದಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಉತ್ತಮ ಸಮತೋಲನವು ಇಲ್ಲಿ ಉಳಿಯಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.