ADVERTISEMENT

ಗೂಢಚರ್ಯೆ ಆತಂಕ: ಸಾಮಾಜಿಕ ಮಾಧ್ಯಮ ಬಳಕೆಗೆ ನೌಕಾಪಡೆ ನಿಷೇಧ, ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2020, 11:34 IST
Last Updated 4 ಫೆಬ್ರುವರಿ 2020, 11:34 IST
ನೌಕಾಪಡೆ ಯೋಧರು (ಪ್ರಾತಿನಿಧಿಕ ಚಿತ್ರ)
ನೌಕಾಪಡೆ ಯೋಧರು (ಪ್ರಾತಿನಿಧಿಕ ಚಿತ್ರ)   

ನವದೆಹಲಿ:ಕೆಲ ಸಿಬ್ಬಂದಿ ವಿರುದ್ಧ ಗೂಢಚರ್ಯೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನೌಕಾಪಡೆ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ನಿರ್ಬಂಧ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಿದೆ. ಕೆಲ ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲೆ ಭಾಗಶಃ ನಿರ್ಬಂಧಗಳಿದ್ದರೆ,ಕೆಲ ಸಾಮಾಜಿಕ ಮಾಧ್ಯಮಗಳನ್ನು ಸಂಪೂರ್ಣನಿಷೇಧಿಸಲಾಗಿದೆ.

ವಿಶಾಖಪಟ್ಟಣ, ಕಾರವಾರ ಮತ್ತು ಮುಂಬೈ ಕಿನಾರೆಯ ನೌಕಾನೆಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಸಿಬ್ಬಂದಿ ಗೂಢಚರ್ಯೆಯಲ್ಲಿ ಶಾಮೀಲಾಗಿರುವ ವಿಚಾರಆಂಧ್ರ ಪ್ರದೇಶ ಪೊಲೀಸರು ನಡೆಸಿದಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿತ್ತು. ಇದಾದ ನಂತರ ತನ್ನ ಸಿಬ್ಬಂದಿ ಫೇಸ್‌ಬುಕ್‌ ಬಳಸುವುದನ್ನು ನೌಕಾಪಡೆ ನಿರ್ಬಂಧಿಸಿತ್ತು. ನೌಕಾ ನೆಲೆಗಳು ಮತ್ತು ಯುದ್ಧನೌಕೆಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆಯನ್ನು ನಿಷೇಧಿಸಿತ್ತು.

2015ರಲ್ಲಿ ಪ್ರಕಟಿಸಲಾದ ನೌಕಾಪಡೆಯ ಸಾಮಾಜಿಕ ಮಾಧ್ಯಮಮಾರ್ಗದರ್ಶಿ ಸೂತ್ರಗಳಿಗೆ ಹೊಸ ಅಂಶಗಳಸೇರ್ಪಡೆಯ ವಿಚಾರದ ಬಗ್ಗೆಮೂಲಗಳನ್ನು ಉಲ್ಲೇಖಿಸಿ ‘ದಿ ಪ್ರಿಂಟ್’ ಜಾಲತಾಣ ವರದಿ ಮಾಡಿದೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಿಚಾಟ್, ವಿಬರ್, ಟಂಬ್ಲರ್, ಪಬ್‌ಜಿ, ಟ್ರೂಕಾಲರ್‌ಮತ್ತು ರೆಡಿಟ್‌ ಆ್ಯಪ್‌ಗಳನ್ನುಸಂಪೂರ್ಣ ನಿಷೇಧಿಸಲಾಗಿದೆ. ಟ್ವಿಟರ್, ವಾಟ್ಸ್ಯಾಪ್, ಟೆಲಿಗ್ರಾಂ, ಸಿಗ್ನಲ್, ಯುಟ್ಯೂಬ್, ಸ್ಕೈಪ್, ಕೋರಾ ಮತ್ತು ಲಿಂಕ್ಡ್‌ಇನ್‌ಗಳ ಮೇಲೆ ಭಾಗಶಃ ನಿರ್ಬಂಧ ವಿಧಿಸಲಾಗಿದೆ.

ನಿಷೇಧಿತ ಆ್ಯಪ್‌ಗಳನ್ನು ನೌಕಾಪಡೆ ಸಿಬ್ಬಂದಿ ಬಳಸುವಂತಿಲ್ಲ. ಆದರೆಭಾಗಶಃ ನಿರ್ಬಂಧವಿರುವ ಆ್ಯಪ್‌ಗಳ ಮೂಲಕಓರ್ವ ಸಿಬ್ಬಂದಿ ಕಂಟೆಂಟ್ವೀಕ್ಷಿಸಬಹುದು. ಆದರೆ ಯಾವುದೇ ಕಂಟೆಂಟ್ ಅಪ್‌ಲೋಡ್ ಮಾಡುವಂತಿಲ್ಲ ಎಂದು ವರದಿ ಹೇಳಿದೆ.

ಫೇಸ್‌ಬುಕ್ ಅಕೌಂಟ್‌ಗಳನ್ನು ಡಿಆ್ಯಕ್ಟಿವೇಟ್ ಮಾಡುವಂತೆಕಳೆದ ವರ್ಷ ಭೂಸೇನೆಯುಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಯಾವುದೇ ಆ್ಯಪ್‌ನಲ್ಲಿ ಅಧ್ಯಾತ್ಮಿಕಗುರುಗಳ ಹೆಸರಿನಲ್ಲಿ ಕ್ರಿಯೇಟ್ ಮಾಡಲಾದ ಅಕೌಂಟ್‌ಗಳಿಂದಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸಲಾಗಿತ್ತು.

ರಷ್ಯಾ ಸೇನೆ ಸಹ ಈಚೆಗಷ್ಟೇತನ್ನೆಲ್ಲಾ ಸಿಬ್ಬಂದಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.