ADVERTISEMENT

ಓಮೈಕ್ರಾನ್‌: ಲಾಕ್‌ಡೌನ್‌ ಬೇಡ ಎನ್ನುತ್ತಿರುವ ನೆಟ್ಟಿಗರು 

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 10:45 IST
Last Updated 30 ನವೆಂಬರ್ 2021, 10:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ವಿಶ್ವದೆಲ್ಲೆಡೆ ಈಗ ಹೊಸ ರೂಪಾಂತರಿ ವೈರಸ್ ಓಮೈಕ್ರಾನ್‌ ಸದ್ದು ಮಾಡುತ್ತಿದ್ದು, ನೆಟ್ಟಿಗರು ಲಾಕ್‌ಡೌನ್ ಮಾಡುವುದು ಬೇಡ ಎನ್ನುತ್ತಿದ್ದಾರೆ.

ಸಾಕಷ್ಟು ಜನರಿಗೆ ವೈರಸ್ ಸೋಂಕು ತಗಲುವ ಆತಂಕಕ್ಕಿಂತ ಲಾಕ್‌ಡೌನ್‌ ಭಯವೇ ಹೆಚ್ಚು ಕಾಡುತ್ತಿದ್ದು, ಕೋವಿಡ್‌ ಬೂಸ್ಟರ್ ನೀಡುವ ಬಗ್ಗೆ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆತ್ಮೀಯ ಪ್ರಧಾನಿ ಸಾರ್, ನಾನು ನಿಮ್ಮ ದೊಡ್ಡ ಅಭಿಮಾನಿ ಆದರೆ, ಈ ಹೊಸ ವೈರಸ್‌ನಿಂದಾಗಿ ಇನ್ನು ಮುಂದೆ ಯಾವುದೇ ಲಾಕ್‌ಡೌನ್ ಅನ್ನು ಜಾರಿಗೊಳಿಸದಂತೆ ನಾನು ವಿನಂತಿಸುತ್ತೇನೆ. ನಾವು ಈಗ ಹೆಚ್ಚು ಬಲಿಷ್ಠರಾಗಿದ್ದೇವೆ. ನಾವು ವೈರಸ್‌ನೊಂದಿಗೆ ಎರಡು ಬಾರಿ ಹೋರಾಡಿದ್ದೇವೆ ಮತ್ತು ಎರಡೂ ಬಾರಿಯೂ ವಿಜಯಶಾಲಿಯಾಗಿದ್ದೇವೆ. ಈ ಬಾರಿಯೂ ಅದನ್ನು ಸೋಲಿಸುತ್ತೇವೆ ಎಂದು ಕುಂದನ್ ಭಗವತಿ ಎನ್ನುವವರು ಕೊ ಮಾಡಿದ್ದಾರೆ.

ADVERTISEMENT

ಮತ್ತೆ ಕಟ್ಟು ನಿಟ್ಟಿನ ಕ್ರಮ.. ಮತ್ತೆ ಅದೇ ಬಂಧನದ ಬದುಕು. ಇನ್ನೆಷ್ಟು ವರ್ಷ ಇದೇ ರೀತಿ ನಡೆಯುವುದೋ ದೇವರೇ ಬಲ್ಲ. ಮಾನವ ಮಾಡುವ ತಪ್ಪಿಗೆ ಇಡೀ ಜನಾಂಗವೇ ನರಳಬೇಕಾದ ಪರಿಸ್ಥಿತಿ ಎಂದು ಮಹೇಶ್ ಕುಮಾರ್ ಅವರು ಕೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.