ADVERTISEMENT

ನಮ್ಮ ಅಭ್ಯಾಸಗಳೇ ಹಣವನ್ನು ಪೋಲು ಮಾಡುತ್ತವೆ;ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 12:18 IST
Last Updated 25 ಫೆಬ್ರುವರಿ 2026, 12:18 IST
   

ಹಣ ಎಲ್ಲರ ಅಗತ್ಯತೆಯನ್ನು ಪೂರೈಸುವ ಸಾಧನವಾಗಿದೆ. ಪ್ರತಿದಿನ ಹಣವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಖರ್ಚು ಮಾಡುವವರಿದ್ದಾರೆ. ಕೆಲವರಂತು ಕುಡಿಯಲು, ತಿನ್ನಲು, ಮೋಜು ಮಸ್ತಿ ಮಾಡಲು ಹಣವನ್ನು ನೀರಿನಂತೆ ಬಳಸುತ್ತಾರೆ.

ಇನ್ನು ಕೆಲವರು ತಿಂಗಳು ಪೂರ್ತಿ  ದುಡಿದ ಹಣವನ್ನು ಇಎಂಐ, ಲೋನ್‌ಗಳಿಗೆ ಕಟ್ಟುತ್ತಾರೆ. ಇದರ ನಡುವೆ ನಮ್ಮ ಕೆಲ ಅಭ್ಯಾಸಗಳಿಂದ ದುಡಿದ ಹಣ ನಮಗೆ ಅರಿವಿಲ್ಲದೇ ಖರ್ಚಾಗುತ್ತಿರುತ್ತದೆ.

ಪ್ರಿಯಾ ಯಾದವ್ ಎಂಬುವವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಅವರು ನಾವು ದುಡಿದ ಹಣ ಪೋಲಾಗುತ್ತಿರುವುದು ಹೇಗೆ? ಜತೆಗೆ ಹಣ ಉಳಿಸುವ ಬಗ್ಗೆ ಸಲಹೆಯನ್ನು ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. 

ADVERTISEMENT

ವಿಡಿಯೊದಲ್ಲಿ ‘ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಈ ವರೆಗೆ ₹5 ಲಕ್ಷ ಹಣವನ್ನು ನೀವು ಉಳಿಸಲು ಸಾಧ್ಯವಾಗದೆ ಇದ್ದರೆ, ಅದಕ್ಕೆ ನಿಮ್ಮ ಕೆಲ ಅಭ್ಯಾಸಗಳು ಕಾರಣವಾಗಿವೆ’ ಎಂದು ಹೇಳಿದ್ದಾರೆ. ಶಾಪಿಂಗ್ ಮಾಡುವುದು, ಟ್ರಿಪ್‌ ಹೋಗುವುದು, ಡೇಟಿಂಗ್‌ ಹಾಗೂ ನಿತ್ಯ ಕಾಫಿ, ಟೀ  ಕುಡಿಯುವ ಅಭ್ಯಾಸಗಳು ನಿಮ್ಮ ಹಣವನ್ನು ಅನವಶ್ಯಕವಾಗಿ ಪೋಲು ಮಾಡುತ್ತೇವೆ. ಎಂದು ಹೇಳಿದ್ದಾರೆ. ‌‌

‘ನಾವು 2026ರಲ್ಲಿ ಇದ್ದೇವೆ. ನಮಗೆ ಉಚಿತ ಶಿಕ್ಷಣವಿದೆ. ಸಾಕಷ್ಟು ಕೆಲಸಗಳಿವೆ. ಹಣ ಸಂಪಾದಿಸಲು ಹಲವು ಮಾರ್ಗಗಳಿವೆ. ಆದರೆ ನಾವು ಹಣಗಳಿಸುತ್ತಿಲ್ಲ’ ಎಂದು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.