ವಿಯೆಟ್ನಾಂ: ಕಳೆದ ವರ್ಷ ಭಾರತದಲ್ಲಿ 84 ಸಾವಿರಕ್ಕೂ ಅಧಿಕ ಗೇಮಿಂಗ್ ಖಾತೆ ಬಳಕೆದಾರರ ವಿವರಗಳು ಸೋರಿಕೆಯಾಗಿದ್ದವು ಎಂದು ಕ್ಯಾಸ್ಪರ್‌ಸ್ಕಿ ಮಂಗಳವಾರ ಹೇಳಿದೆ.
ಕ್ಯಾಸ್ಪರ್‌ಸ್ಕಿ, ಸೈಬರ್ ಭದ್ರತೆ ಹಾಗೂ ಡಿಜಿಟಲ್ ಖಾಸಗಿತನಕ್ಕೆ ಸಂಬಂಧಿಸಿದ ಜಾಗತಿಕ ಕಂಪನಿಯಾಗಿದೆ.
ಏಷ್ಯಾ–ಪೆಸಿಫಿಕ್ ಪ್ರದೆಶದಲ್ಲಿ (ಎಪಿಎಸಿ), ಗರಿಷ್ಠ ಸಂಖ್ಯೆಯಲ್ಲಿ ಗೇಮಿಂಗ್ ಖಾತೆ ವಿವರಗಳ ಸೋರಿಕೆ ಥಾಯ್ಲೆಂಡ್‌ನಲ್ಲಿ ಕಂಡುಬಂದಿದ್ದರೆ, ಕನಿಷ್ಠ ಪ್ರಮಾಣದ ಸೋರಿಕೆ ಸಿಂಗಪುರದಲ್ಲಿ ವರದಿಯಾಗಿದೆ ಎಂದು ಕಂಪನಿ ಹೇಳಿದೆ.
ಏಷ್ಯಾ–ಪೆಸಿಫಿಕ್ ಪ್ರದೇಶವು ಏಷ್ಯಾದ ಗೇಮಿಂಗ್ ಕೇಂದ್ರವಾಗಿ ಹೊರಹೊಮ್ಮಿದೆ. ಜಗತ್ತಿನ ಗೇಮಿಂಗ್ ಬಳಕೆದಾರರ ಪೈಕಿ ಅರ್ಧದಷ್ಟು ಜನರು ಈ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಅದರಲ್ಲೂ ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಬಳಕೆದಾರರ ಪ್ರಮಾಣ ಹೆಚ್ಚು.
ಥಾಯ್ಲೆಂಡ್‌ನಲ್ಲಿ 1,62,892 ಪ್ರಕರಣಗಳು ವರದಿಯಾಗಿದ್ದರೆ, ನಂತರ ಸ್ಥಾನಗಳಲ್ಲಿ ಫಿಲಿಪ್ಪೀನ್ಸ್–99,273, ವಿಯೆಟ್ನಾಂ–87,969, ಭಾರತ–84,262,ಇಂಡೊನೇಷ್ಯಾ–69,909, ಮಲೇಷ್ಯಾ–37,718, ದಕ್ಷಿಣ ಕೊರಿಯಾ–37,097, ಚೀನಾ–18,786, ಶ್ರೀಲಂಕಾ–10,877 ಹಾಗೂ ಸಿಂಗಪುರದಲ್ಲಿ 4,262 ಸೋರಿಕೆ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.