ADVERTISEMENT

‘ಥ್ರೆಡ್ಸ್’: ಮೆಟಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಟ್ವಿಟರ್

ರಾಯಿಟರ್ಸ್
Published 7 ಜುಲೈ 2023, 2:11 IST
Last Updated 7 ಜುಲೈ 2023, 2:11 IST
   

ಸ್ಯಾನ್ ಫ್ರಾನ್ಸಿಸ್ಕೊ: ಹೊಸ ‘ಥ್ರೆಡ್ಸ್’ಆ್ಯಪ್‌ಗೆ ಸಂಬಂಧಿಸಿದಂತೆ ಮೆಟಾ ಕಂಪನಿ ವಿರುದ್ಧ ಟ್ವಿಟರ್ ಕಂಪನಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಸೆಮಾಫೋರ್ ಗುರುವಾರ ವರದಿ ಮಾಡಿದೆ, ಟ್ವಿಟರ್‌ನ ವಕೀಲ ಅಲೆಕ್ಸ್ ಸ್ಪಿರೊ ಅವರು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಟ್ವಿಟರ್ ತನ್ನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಉದ್ದೇಶಿಸಿದೆ. ಯಾವುದೇ ಟ್ವಿಟರ್ ವ್ಯಾಪಾರ ರಹಸ್ಯಗಳು ಅಥವಾ ಇತರ ಗೋಪ್ಯ ಮಾಹಿತಿ ಬಳಸುವುದನ್ನು ನಿಲ್ಲಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮೆಟಾವನ್ನು ಒತ್ತಾಯಿಸುತ್ತೇವೆ’ಎಂದು ಸ್ಪಿರೊ ಪತ್ರದಲ್ಲಿ ಬರೆದಿದ್ದಾರೆ.

ಇನ್‌ಸ್ಟಾಗ್ರಾಮ್‌ನ ಶತಕೋಟಿ ಬಳಕೆದಾರರನ್ನು ಬಳಸಿಕೊಂಡು ಮೆಟಾ, ಎಲಾನ್ ಮಸ್ಕ್‌ ಮಾಲೀಕತ್ವದ ಟ್ವಿಟರ್‌ಗೆ ಎದುರಾಗಿ ‘ಥ್ರೆಡ್ಸ್‌’ ಎಂಬ ಹೊಸ ಆ್ಯಪ್ ಅನ್ನು ಬುಧವಾರ ಬಿಡುಗಡೆಗೊಳಿಸಿತ್ತು.

ADVERTISEMENT

ಈ ಕುರಿತಂತೆ ರಾಯಿಟರ್ಸ್ ಸಂಪರ್ಕಿಸಿದಾಗ ಮೆಟಾ ಮತ್ತು ವಕೀಲ ಸ್ಪಿರೊ ಕಡೆಯಿಂದ ಯಾವುದೇ ಪ್ರತಿಕ್ರಿಯ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.