ADVERTISEMENT

ಉತ್ತಮ ಟ್ವೀಟ್‌ಗಳನ್ನು ಹುಡುಕಿ ಹಂಚಲು ಹೊಸ ಖಾತೆ ತೆರೆದ ಟ್ವಿಟರ್‌

@TwitterRetweets

ಏಜೆನ್ಸೀಸ್
Published 7 ಡಿಸೆಂಬರ್ 2019, 10:53 IST
Last Updated 7 ಡಿಸೆಂಬರ್ 2019, 10:53 IST
ಟ್ವಿಟರ್‌ನ @TwitterRetweets ಖಾತೆ
ಟ್ವಿಟರ್‌ನ @TwitterRetweets ಖಾತೆ   

ಸ್ಯಾನ್‌ ಫ್ರಾನ್ಸಿಸ್ಕೊ:ಸಾಮಾಜಿಕ ಸಂಪರ್ಕ ಮಾಧ್ಯಮವಾಗಿಯೂ ಬಳಕೆಯಾಗುತ್ತಿರುವಜನಪ್ರಿಯ ಮೈಕ್ರೊ ಬ್ಲಾಗಿಂಗ್‌ ವೇದಿಕೆ ಟ್ವಿಟರ್‌, ಇದೀಗ ಉತ್ತಮ ಟ್ವೀಟ್‌ಗಳನ್ನು ಒಂದೆಡೆ ತರುವ ಪ್ರಯತ್ನ ನಡೆಸಿದೆ. ಅದಕ್ಕಾಗಿ ಹೊಸ ಟ್ವಿಟರ್‌ ಖಾತೆಯನ್ನೂ ತೆರೆದಿದೆ.

ಟ್ವಿಟರ್‌ ರಿಟ್ವೀಟ್ಸ್‌ (@TwitterRetweets) ಖಾತೆಯ ಮೂಲಕ ನಿತ್ಯ ಹರಿದಾಡುವ ಲಕ್ಷಾಂತರ ಟ್ವೀಟ್‌ಗಳ ಪೈಕಿ ಆಯ್ದ ಟ್ವೀಟ್‌ಗಳನ್ನು ಮರುಹಂಚಿಕೆ ಮಾಡಿಕೊಳ್ಳುತ್ತಿದೆ. ಟ್ವಿಟರ್‌ ರಿಟ್ವೀಟ್ಸ್‌ ಖಾತೆಯನ್ನು ಹಿಂಬಾಲಿಸುತ್ತಿರುವವರ ಟ್ವೀಟ್‌ಗಳಲ್ಲಿ ಉತ್ತಮವಾದುದನ್ನು ಹಂಚಿಕೊಳ್ಳುತ್ತಿದೆ. ಫೇಸ್‌ಬುಕ್‌ ಸ್ವಾಮ್ಯದ ಫೋಟೊ ಹಂಚಿಕೊಳ್ಳುವ ವೇದಿಕೆ ಇನ್‌ಸ್ಟಾಗ್ರಾಮ್‌ನಲ್ಲೂ ಖಾತೆ ತೆರೆದಿದ್ದು, ಉತ್ತಮ ಟ್ವೀಟ್‌ಗಳ ಸ್ಕ್ರೀನ್‌ ಶಾಟ್‌ಗಳನ್ನು ಪ್ರಕಟಿಸುತ್ತಿದೆ.

ಕಿರುಕುಳ, ಸುಳ್ಳು ಸುದ್ದಿಗಳು, ಹಾದಿ ತಪ್ಪಿಸುವ ಮಾಹಿತಿ, ನಿಂದನಾತ್ಮಕ ಟ್ರೋಲ್‌ಗಳಿಂದ ಟ್ವಿಟರ್‌ ಸಂಕಷ್ಟಕ್ಕೆ ಸಿಲುಕಿದ್ದು, ಅಂತಹ ಟ್ವೀಟ್‌ಗಳ ನಿಯಂತ್ರಣಕ್ಕಾಗಿ ನಿಗಾವಹಿಸಲು ಹೆಣಗಾಡುತ್ತಿದೆ. ಹೊಸ ರಿಟ್ವೀಟ್ಸ್‌ ಖಾತೆಯಲ್ಲಿ ಇಡೀ ಟ್ವಿಟರ್‌ನ ಎಲ್ಲ ಟ್ವೀಟ್‌ಗಳ ಪೈಕಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಲು ಇದರಿಂದ ಸಾಧ್ಯವಾಗುವುದಿಲ್ಲ. ಆದರೆ, ಟ್ವೀಟಿಗರಲ್ಲಿ ಉತ್ತಮ ಟ್ವೀಟ್‌ ಹವ್ಯಾಸವನ್ನು ರೂಢಿಸಲು ಸಹಕಾರಿಯಾಗಬಹುದಾಗಿದೆ.

ADVERTISEMENT

ಉತ್ತಮ ಟ್ವೀಟ್‌ ಎಂದು ಹಂಚಿಕೊಳ್ಳುವ ಮೊದಲು ಟ್ವಿಟರ್‌ ರಿಟ್ವೀಟ್ಸ್‌ ಖಾತೆ, ಟ್ವೀಟಿಗ ಪ್ರಕಟಿಸಿಕೊಂಡಿರುವ ಬರಹ ಸ್ವಂತದ್ದೇ ಅಥವಾ ಮತ್ತೊಬ್ಬರಿಂದ ನಕಲು ಮಾಡಿದ್ದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವ ಸವಾಲು ಸಹ ಇದೆ.ಈಗಾಗಲೇ 11,700ಕ್ಕೂ ಹೆಚ್ಚು ಟ್ವೀಟಿಗರು@TwitterRetweets ಖಾತೆಯನ್ನು ಹಿಂಬಾಲಿಸುತ್ತಿದ್ದು, ರಿಟ್ವೀಟ್ಸ್‌ ಕೇವಲ 11 ಟ್ವಿಟರ್‌ ಖಾತೆಗಳನ್ನಷ್ಟೇ ಫಾಲೊ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.