ADVERTISEMENT

ರಾಜಕೀಯ ಜಾಹೀರಾತು ನಿಷೇಧ ತೆರವು: ಟ್ವೀಟರ್‌

ಏಜೆನ್ಸೀಸ್
Published 4 ಜನವರಿ 2023, 15:29 IST
Last Updated 4 ಜನವರಿ 2023, 15:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸ್ಯಾನ್‌ ಫ್ರಾನ್ಸಿಸ್ಕೊ (ಎಪಿ): ರಾಜಕೀಯ ಜಾಹೀರಾತುಗಳ ನಿಷೇಧ ನಿಯಮವನ್ನು ಸಡಿಲಿಸುವುದಾಗಿ ಟ್ವೀಟರ್‌ ತಿಳಿಸಿದೆ.

‘ಜಾಹೀರಾತು ನಿಯಮಗಳನ್ನು ಸಡಿಲಿಸುತ್ತಿದ್ದೇವೆ. ರಾಜಕೀಯ ಜಾಹೀರಾತುಗಳಿಗೂ ಮುಂಬರುವ ವಾರಗಳಲ್ಲಿ ಅವಕಾಶ ನೀಡಲು ಚಿಂತಿಸಿದ್ದೇವೆ’ ಎಂದು ಮಂಗಳವಾರ ಟ್ವೀಟ್ ಮಾಡಿದೆ.

ಎಲಾನ್ ಮಸ್ಕ್‌ ಅವರು ಟ್ವೀಟರ್‌ ಖರೀದಿ ಬಳಿಕ ಅದರ ಆದಾಯ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. 2019ರಲ್ಲಿ ಟ್ವೀಟರ್‌ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.