ನವದೆಹಲಿ: ರೈತರ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಸುಮಾರು 550 ಖಾತೆಗಳನ್ನು ಟ್ವೀಟರ್ ಸ್ಥಗಿತಗೊಳಿಸಿದೆ.
ಬಹುತೇಕ ಈ ಖಾತೆಗಳು ಖಾಲಿಸ್ತಾನದ ಬೆಂಬಲಿಗರು. ಭಾರತ ವಿರೋಧಿ ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಿರುವುದು ಗೊತ್ತಾದ ಬಳಿಕ ಟ್ವೀಟರ್ ಈ ಕ್ರಮ ಕೈಗೊಂಡಿದೆ. ಕೆನಡಾ ಮತ್ತು ಬ್ರಿಟನ್ನಿಂದ ಈ ಖಾತೆಗಳನ್ನು ನಿರ್ವಹಿಸಲಾಗುತ್ತಿತ್ತು.
‘ಹಿಂಸಾಚಾರ, ನಿಂದನೆ ಮತ್ತು ಬೆದರಿಕೆವೊಡ್ಡುವ ಪ್ರಯತ್ನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಟ್ವೀಟರ್ ವಕ್ತಾರರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.