ಆನೆಗಳ ಹಿಂಡಿನಲ್ಲಿ ಕಾಣುವ ಮುದ್ದಾದ ಮರಿಯಾನೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಎಂಬುವರು ತಮಿಳುನಾಡಿನ ಸತ್ಯಮಂಗಲಂಅಭಯಾರಣ್ಯದಲ್ಲಿ ಆನೆಗಳ ಗುಂಪಿನಲ್ಲಿ ಕಂಡುಬಂದ ಮರಿಯಾನೆಯ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಮರಿ ಆನೆಗೆ ಗಜಪಡೆಯು 'Z+' ಸೆಕ್ಯೂರಿಟಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.
ಮುದ್ದಾದ ಮರಿಯಾನೆ ಹಾಗೂ ಗಜಪಡೆಯ ಗಾಂಭೀರ್ಯಕ್ಕೆ ನೆಟ್ಟಿಗರುಫಿದಾ ಆಗಿದ್ದಾರೆ. ಮರಿಗೆ ಆನೆಗಳ ನೀಡಿರುವ ಭದ್ರತೆಯನ್ನು ಮೆಚ್ಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ಈ ವಿಡಿಯೊ ಲಕ್ಷಾಂತರ ವೀಕ್ಷಣೆ ಕಂಡಿದೆ.
ವಿಡಿಯೊ ನೋಡಿ....
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.