ADVERTISEMENT

‘ವಾಟ್ಸ್‌ಆ್ಯಪ್ ಪೇ’ ಭಾರತದ ಮುಖ್ಯಸ್ಥ ವಿನಯ್ ಚೊಲೆಟ್ಟಿ ರಾಜೀನಾಮೆ

ಪಿಟಿಐ
Published 15 ಡಿಸೆಂಬರ್ 2022, 8:51 IST
Last Updated 15 ಡಿಸೆಂಬರ್ 2022, 8:51 IST
   

ನವದೆಹಲಿ: ‘ವಾಟ್ಸ್‌ಆ್ಯಪ್ ಪೇ’ಭಾರತದ ಮುಖ್ಯಸ್ಥ ವಿನಯ್ ಚೊಲೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಡ್ತಿ ಪಡೆದ ನಾಲ್ಕೇ ತಿಂಗಳಿಗೆ ಅವರು ಹುದ್ದೆ ತ್ಯಜಿಸಿದ್ದಾರೆ.

ನವೆಂಬರ್‌ನಲ್ಲಿ ಮೆಟಾ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಪದ ತ್ಯಾಗದ ಬಳಿಕ ಒಂದೂವರೆ ತಿಂಗಳಲ್ಲಿ ಆದ ನಾಲ್ಕನೇ ಉನ್ನತ ಹುದ್ದೆಯ ರಾಜೀನಾಮೆ ಇದಾಗಿದೆ.

ಮೋಹನ್ ರಾಜೀನಾಮೆ ಬಳಿಕ ವಾಟ್ಸ್‌ಆ್ಯಪ್ ಇಂಡಿಯಾ ಮುಖ್ಯಸ್ಥರಾಗಿದ್ದ ಅಭಿಜಿತ್ ಬೋಸ್, ಮೆಟಾ ಇಂಡಿಯಾ ಪಬ್ಲಿಕ್ ಪಾಲಿಸಿ ಮುಖ್ಯಸ್ಥ ರಾಜೀವ್ ಅಗರ್‌ವಾಲ್ ಸಹ ರಾಜೀನಾಮೆ ಸಲ್ಲಿಸಿದ್ದರು.

ADVERTISEMENT

ವಾಟ್ಸ್‌ಆ್ಯಪ್‌ ಕಂಪನಿಯಿಂದ ಹೊರಬರುತ್ತಿರುವ ಮಾಹಿತಿಯನ್ನು ಚೊಲೆಟ್ಟಿ, ಲಿಂಕ್ಡ್ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಇಂದು ವಾಟ್ಸ್‌ಆ್ಯಪ್‌ ಪೇನಲ್ಲಿ ನನ್ನ ಕೊನೆಯ ದಿನವಾಗಿತ್ತು. ಭಾರತದಲ್ಲಿ ವಾಟ್ಸ್‌ಆ್ಯಪ್ ಪ್ರಭಾವ ಮತ್ತು ಅದರ ವ್ಯಾಪ್ತಿ ನೋಡಿದ್ದು ಉತ್ತಮ ಅನುಭವವಾಗಿದೆ’ ಎಂದು ಬುಧವಾರ ಮಾಡಿರುವ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಟೋಬರ್ 2021ರಂದು ಚೊಲೆಟ್ಟಿ ಅಮೇಜಾನ್ ಬಿಟ್ಟು ವಾಟ್ಸ್‌ಆ್ಯಪ್ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.