ADVERTISEMENT

ಖಚಿತ ಟಿಕೆಟ್‌ಗಾಗಿ ಪಂಚ ಸಲಹೆಗಳು...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 12:35 IST
Last Updated 23 ಅಕ್ಟೋಬರ್ 2019, 12:35 IST
ConfirmTkt Logo
ConfirmTkt Logo   

ಭಾರತದಲ್ಲಿ ಅನೇಕ ಪ್ರವಾಸಿಗರು ಸುಖಕರ ಹಾಗೂ ಕಡಿಮೆ ವೆಚ್ಚದ ಪ್ರಯಾಣಕ್ಕಾಗಿ ರೈಲುಗಳನ್ನು ಆಶ್ರಯಿಸುತ್ತಾರೆ.

ಭಾರದಲ್ಲಿ 7000 ರೈಲ್ವೆ ಸ್ಟೇಷನ್‌ ಇದೆ. ಸುಮಾರು 1,51,000 ಕಿಲೋ ಮೀಟರ್ ಟ್ರ್ಯಾಕ್ ಹೊಂದಿದೆ. ಪ್ರತಿನಿತ್ಯ 13,000 ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತವೆ.

ಕೊನೆ ಘಳಿಗೆಯ ಟಿಕೆಟ್‌ಗಾಗಿ ಪ್ರಯಾಣಿಕರ ಒದ್ದಾಟ ನಿಲ್ಲಿಸಿ ಖಚಿತವಾದ ರೈಲ್ವೆ ಟಿಕೆಟ್ ಪಡೆಯಲು ಕನ್ಫರ್ಮ್ ಟಿಕೆಟ್ ಸಂಸ್ಥೆ ಪಂಚ ಸಲಹೆಗಳನ್ನು ಇಲ್ಲಿ ನೀಡಿದೆ.

ADVERTISEMENT

1. ಟಿಕೆಟ್ ಬುಕಿಂಗ್ ಗೆ ಆನ್ಲೈನ್ ವಿಧಾನದ ಸೂಕ್ತ

ಆನ್ಲೈನ್ ಬುಕಿಂಗ್ ವೇದಿಕೆ, ಟಿಕೆಟ್‌ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿದೆ. ಸ್ವಲ್ಪ ಸಮಯ ನೀಡಿದರೆ, ರೈಲ್ವೆ ಸ್ಟೇಷನ್ ಗೆ ಹೋಗದೆ ನಿಮ್ಮ ಬೆರಳ ತುದಿಯಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಐಆರ್‌ಸಿಟಿಸಿ ಕನೆಕ್ಟ್ (IRCTC Connect), ಕನ್ಫರ್ಮ್ ಟಿಕೆಟ್, ರೈಲ್‌ಯಾತ್ರಿ (RailYatri) ಸೇರಿದಂತೆ ವಿವಿಧ ಆ್ಯಪ್ ಗಳ ಮೂಲಕ ಕಡಿಮೆ ದರದಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಈ ಆ್ಯಪ್ ಗಳು ರಿಯಾಯಿತಿ, ಬೋನಸ್ ಪಾಯಿಂಟ್ ಮತ್ತು ಗ್ರಾಹಕ ಸೇವಾ ಕೇಂದ್ರ ಸೇವೆಯನ್ನು ಸಹ ಒದಗಿಸುತ್ತವೆ. ಇನ್ನೊಂದು ಬಹುದೊಡ್ಡ ಲಾಭ ಎಂದರೆ ಟಿಕೆಟ್ ಬುಕಿಂಗ್ ಸ್ಟೇಟಸ್ ಅನ್ನು ಈ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು.

2. ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ

ನೀವು ಪ್ರಯಾಣ ಮಾಡುವುದು ಖಚಿತವಾದರೆ ಟಿಕೆಟ್ ಅನ್ನು ಕನಿಷ್ಠ ತಿಂಗಳ ಹಿಂದಿಯೇ ಬುಕ್ ಮಾಡುವುದು ಒಳ್ಳೆಯದು. ಪರಿಣಾಮ ನೀವು ಖಚಿತ ಟಿಕೆಟ್ ಪಡೆದುಕೊಳ್ಳಬಹುದು. ಟ್ರೈನ್ ಹೊರಡುವ ಕನಿಷ್ಠ 3 ತಿಂಗಳ ಮುಂಚೆಯೇ ಟಿಕೆಟ್ ಬುಕ್ ಮಾಡಿಕೊಳ್ಳಲು ಭಾರತೀಯ ರೈಲ್ವೆ ಗ್ರಾಹಕರಿಗೆ ಅವಕಾಶ ಕಲ್ಪಿಸಿದೆ. ಒಂದು ವೇಳೆ ನೀವು ಕೊನೆ ಘಳಿಗೆಯಲ್ಲಿ ಖಚಿತ ಟಿಕೆಟ್ ಬೇಕೆಂದು ಬಯಸಿದರೆ 'ತತ್ಕಾಲ್' ಅಡಿಯಲ್ಲಿ ಪ್ರಯತ್ನಿಸಿ ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು.

3. ವಾರದ ದಿನಗಳಲ್ಲಿ ಪ್ರಯಾಣ ಬೆಳೆಸುವುದು ಸೂಕ್ತ

ವಾರಂತ್ಯದಲ್ಲಿ ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ವಾರದ ದಿನಗಳಲ್ಲಿ ಪ್ರಯಾಣಿಸಿದರೆ ಟಿಕೆಟ್ ಖಚಿತವಾಗಿ ಸಿಗುವ ಸಾಧ್ಯತೆ ಹೆಚ್ಚು. ಅದೇ ರೀತಿ ಸಂಜೆ 5 ರಿಂದ 9 ಗಂಟೆಗೆ ಹೊರಡುವ ಟ್ರೈನ್ ಗಳಲ್ಲಿ ಕೂಡ ಟಿಕೆಟ್ ಸಿಗುವುದು ಕಷ್ಟ. ಅದ್ದರಿಂದ ಹಗಲಿನಲ್ಲಿ ಪ್ರಯಾಣ ಬೆಳೆಸುವುದು ಸೂಕ್ತ ಎನ್ನುವ ಅಭಿಪ್ರಾಯ ತಜ್ಞರದ್ದು.

4. ಪಿಎನ್ಆರ್ ಸ್ಟೇಟಸ್ ಪರೀಕ್ಷಿಸಿ

ಪ್ರಯಾಣ ಆರಂಭಿಸುವ ಮುನ್ನ ನಿಮ್ಮ ಪಿಎನ್ಆರ್ ಸ್ಟೇಟಸ್ ಪರೀಕ್ಷಿಸಿಕೊಳ್ಳಿ. ಒಂದು ವೇಳೆ ನೀವು ಫ್ಯಾಮಿಲಿ ಅಥವಾ ಗ್ರೂಪ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ಪಿಎನ್ಆರ್ ಸ್ಟೇಟಸ್ ಪರೀಕ್ಷಿಸಿ ಟಿಕೆಟ್ ಕನ್ಫರ್ಮ್ ಆಗಿದ್ದರೆ ಮಾತ್ರ ಪ್ರಯಾಣ ಬೆಳೆಸುವುದು ಸೂಕ್ತ. ಇದನ್ನು ನೀವು ನಿಮ್ಮ ಬೆರಳ ತುದಿಯಲ್ಲಿ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು.

5. ಪ್ರಸಿದ್ದ ಸ್ಥಳಗಳಿಗೆ ಪರ್ಯಾಯ ಮಾರ್ಗ ಬಳಸಿ

ಕೆಲವು ಸ್ಥಳಗಳಿಗೆ ಟ್ರೈನ್‌ಗಳು ಯಾವಾಗಲೂ ಪ್ರಯಾಣಿಕರಿಂದ ತುಂಬಿರುತ್ತವೆ. ಈ ಕಾರಣಕ್ಕಾಗಿ ಪ್ರಸಿದ್ದ ಸ್ಥಳಗಳಿಗೆ ರೈಲ್ ಮೂಲಕ ಪ್ರಯಾಣಿಸುವಾಗ ಪ್ಲಾನಿಂಗ್ ಮಾಡಿಕೊಳ್ಳಬೇಕು. ಈ ಸ್ಥಳಗಳಿಗೆ ಪ್ರಯಾಣಿಸಲು ಖಚಿತ ಟಿಕೆಟ್ ಬೇಕೆಂದರೆ ಪರ್ಯಾಯ ಮಾರ್ಗದ ಮೂಲಕ ಟಿಕೆಟ್ ಬುಕ್ ಮಾಡುವುದು ಸೂಕ್ತ. ಉದಾಹರಣೆಗೆ: ನೀವು ದೆಹಲಿಯಿಂದ ಲೂಧಿಯಾನಕ್ಕೆ ಪ್ರಯಾಣ ಬೆಳೆಸುತ್ತಿದ್ದರೆ ನೇರ ಮಾರ್ಗದ ರೈಲಿನ ಆಯ್ಕೆಗಿಂತ ಪರ್ಯಾಯ ಮಾರ್ಗದ ಟ್ರೈನ್ ಸಹಕಾರಿ. ಈ ತರಹದ ಪ್ರಯಾಣ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಂಡರೂ ನಿಮಗೆ ಖಚಿತ ಟಿಕೆಟ್ ದೊರೆಯುತ್ತದೆ.

(ಮಾಹಿತಿ: ಕನ್ಫರ್ಮ್ ಟಿಕೆಟ್ - ಟ್ರೈನ್ ಬುಕಿಂಗ್ ಮತ್ತು ಅನ್ವೇಷಣೆ ವೇದಿಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.