ADVERTISEMENT

ಭಾರತಕ್ಕೂ ಬಂತು 5ಜಿ: ಈ ಸೂಪರ್ ಟೆಕ್ನಾಲಜಿ ಬಳಸುವ ವಿಶ್ವದ ಟಾಪ್ 10 ದೇಶಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2022, 8:06 IST
Last Updated 1 ಅಕ್ಟೋಬರ್ 2022, 8:06 IST
5ಜಿ
5ಜಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರುಬಹುನಿರೀಕ್ಷಿತ 5ಜಿ ದೂರಸಂಪರ್ಕ ಸೇವೆಗಳಿಗೆ ಇಂದು ಚಾಲನೆ ನೀಡಿದರು.

ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಹೆಚ್ಚು ವೇಗದ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ.

ಮೊದಲ ಹಂತದಲ್ಲಿ 13 ಆಯ್ದ ನಗರಗಳಲ್ಲಿ ಮಾತ್ರವೇ 5 ಜಿ ಸೇವೆ ಲಭ್ಯವಾಗಲಿದ್ದು, ಮುಂದಿನ ಎರಡು ವರ್ಷಗಳ ಒಳಗಾಗಿ ದೇಶದಾದ್ಯಂತ ಸೇವೆ ಲಭ್ಯವಾಗಲಿದೆ ಎಂದು ಮೋದಿ ಹೇಳಿದ್ದಾರೆ. ಸದ್ಯ ಪ್ರಪಂಚದ 75 ದೇಶಗಳಲ್ಲಿ 5ಜಿ ಸೇವೆ ಚಾಲ್ತಿಯಲ್ಲಿದೆ. ಇದೀಗ ಭಾರತ ಹೊಸ ಸೇರ್ಪಡೆಯಾಗಿದೆ.

ADVERTISEMENT

75 ದೇಶಗಳ 1947 ನಗರಗಳಲ್ಲಿ 5ಜಿ ಸೇವೆ ಲಭ್ಯವಿದೆ.

5ಜಿ ಬಳಸುತ್ತಿರುವ ಟಾಪ್ 10 ರಾಷ್ಟ್ರಗಳು

1 ಚೀನಾ (356 ನಗರಗಳು)
2 ಅಮೆರಿಕ (296)
3 ಫಿಲಿಫ್ಪೈನ್ಸ್ (98 ನಗರಗಳು)
4 ದಕ್ಷಿಣ ಕೊರಿಯಾ (85 ನಗರಗಳು)
5 ಕೆನಡಾ (84 ನಗರಗಳು)
6 ಸ್ಪೇನ್ (71 ನಗರಗಳು)
7 ಇಟಲಿ (65 ನಗರಗಳು
8 ಜರ್ಮನಿ (58 ನಗರಗಳು)
9 ಯುನೈಟೆಡ್ ಕಿಂಗ್‌ಡಮ್ (57)
10 ಸೌದಿ ಅರೆಬಿಯಾ (48)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.