ADVERTISEMENT

ಮೇ ತಿಂಗಳಲ್ಲಿ 5ಜಿ ಹರಾಜು?

ಪಿಟಿಐ
Published 13 ಫೆಬ್ರುವರಿ 2022, 13:18 IST
Last Updated 13 ಫೆಬ್ರುವರಿ 2022, 13:18 IST
5G TechnologyiStock-1313835786.jpg
5G TechnologyiStock-1313835786.jpg   

ನವದೆಹಲಿ (ಪಿಟಿಐ): ತರಂಗಾಂತರ ಮಾರಾಟ ಪ್ರಕ್ರಿಯೆಯ ನಿಯಮಗಳಿಗೆಸಂಬಂಧಿಸಿದ ಶಿಫಾರಸುಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮಾರ್ಚ್‌ ಒಳಗೆ ಸಲ್ಲಿಸಿದರೆ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯು ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ.

5ಜಿ ತರಂಗಾಂತರ ಹರಾಜಿಗೆ ಸಂಬಂಧಿಸಿದ ಶಿಫಾರಸುಗಳನ್ನು ಮಾರ್ಚ್‌ಗೆ ಮುನ್ನ ಸಲ್ಲಿಸುವುದಾಗಿ ಟ್ರಾಯ್ ಹೇಳಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಈಚೆಗೆ ತಿಳಿಸಿದ್ದರು. ಹರಾಜನ್ನು ಆದಷ್ಟು ಬೇಗ ನಡೆಸುವುದಕ್ಕೆ ಅಗತ್ಯವಿರುವ ಇತರ ಪ್ರಕ್ರಿಯೆಗಳಿಗೆ ದೂರಸಂಪರ್ಕ ಇಲಾಖೆಯು ಸಜ್ಜಾಗುತ್ತಿದೆ ಎಂದೂ ಅವರು ಹೇಳಿದ್ದರು.

‘ಟ್ರಾಯ್‌ ಶಿಫಾರಸು ಮಾರ್ಚ್‌ ಒಳಗೆ ಬರಲಿದೆ. ಅದಾದ ನಂತರ, ನಮಗೆ ಶಿಫಾರಸುಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಒಂದು ತಿಂಗಳು ಬೇಕು’ ಎಂದು ದೂರಸಂಪರ್ಕ ಕಾರ್ಯದರ್ಶಿ ಕೆ. ರಾಜಾರಾಮನ್ ತಿಳಿಸಿದ್ದಾರೆ.

ADVERTISEMENT

ದೂರಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 4ಜಿ ಸೇವೆಗಳಲ್ಲಿ ಸಿಗುವುದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಡೌನ್‌ಲೋಡ್‌ ವೇಗ 5ಜಿ ಸೇವೆಗಳಲ್ಲಿ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.